ಬಿಸಿಸಿಐ ಹೊಗಳಿ, ಪಿಸಿಬಿಯನ್ನು ತೆಗಳಿದ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ!

ಸಾರ್ವಕಾಲಕ ಶ್ರೇಷ್ಠ ಎಡಗೈ ವೇಗಿ ಪಾಕಿಸ್ತಾನದ ವಾಸಿಂ ಅಕ್ರಂ‌ 2003ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 916 ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆ ಅಕ್ರಮ್‌ ಹೊಂದಿದ್ದಾರೆ. 
ವಾಸಿಂ ಅಕ್ರಂ
ವಾಸಿಂ ಅಕ್ರಂ
Updated on

ನವದೆಹಲಿ: ಸಾರ್ವಕಾಲಕ ಶ್ರೇಷ್ಠ ಎಡಗೈ ವೇಗಿ ಪಾಕಿಸ್ತಾನದ ವಾಸಿಂ ಅಕ್ರಂ‌ 2003ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 916 ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆ ಅಕ್ರಮ್‌ ಹೊಂದಿದ್ದಾರೆ. 
 
ಅಂದಹಾಗೆ ಅಕ್ರಂ‌, ಇಂಜಮಾಮ್ ಉಲ್‌ ಹಕ್‌, ವಕಾರ್‌ ಯೂನಿಸ್‌, ಮೊಹ್ಮಮದ್ ಯೂಸುಫ್‌, ಯೂನಿಸ್‌ ಖಾನ್‌ ಮತ್ತು ಮಿಸ್ಬಾ ಉಲ್‌ ಹಕ್‌ ಅವರಂತಹ ಅನುಭವಿ ಕ್ರಿಕೆಟಿಗರ ನಿವೃತ್ತಿ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡ ಕಳಗುಂದಿದೆ.

90ರ ದಶಕದಲ್ಲಿ ಒಮ್ಮೆ ವಿಶ್ವಕಪ್‌ ಗೆದ್ದು ಮತ್ತೊಮ್ಮೆ ರನ್ನರ್ಸ್‌ಅಪ್‌ ಸ್ಥಾನ ಪಡೆದಿದ್ದ ಪಾಕ್‌ ತಂಡದ ಪ್ರದರ್ಶನ ಮಟ್ಟ ಹೇಳಿಕೊಳ್ಳುವಂತಿಲ್ಲ. ಅದರಲ್ಲೂ ಪಾಕಿಸ್ತಾನ ತಂಡ ಒಂದು ಹೆಜ್ಜೆ ಮುಂದಿಟ್ಟರೆ ನಂತರ ಎರಡು ಹೆಜ್ಜೆ ಹಿಂದೆ ತೆಗೆದುಕೊಳ್ಳುತ್ತಿದೆ ಎಂದೇ ಟೀಕೆ ಮಾಡಲಾಗುತ್ತಿದೆ. ಅದರೆ ಸಾಂಪ್ರದಾಯಿಕೆ ಎದುರಾಳಿ ಟೀಂ‌ ಇಂಡಿಯಾ ದಿಗ್ಗಜರ ನಿವೃತ್ತಿ ನಂತರವೂ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಲೇ ಇದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಇಂದು ಪ್ರಭುತ್ವ ಸಾಧಿಸಿದೆ.

ಇದಕ್ಕೆ ಬಿಸಿಸಿಐ ಮತ್ತು ಪಿಸಿಬಿ ಆಡಳಿತದಲ್ಲಿ ಇರುವ ವ್ಯತ್ಯಾಸವೇ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ‌ ಅಕ್ರಂ ಹೇಳಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿ ಕ್ರಿಕೆಟ್‌ ಅಭಿವೃದ್ಧಿಗೆ ಬಿಸಿಸಿಐ ತೆಗೆದುಕೊಂಡಿರುವ ಗಣನೀಯ ಕ್ರಮಗಳನ್ನು ಅಕ್ರಂ ಕೊಂಡಾಡಿದ್ದಾರೆ.

"ಪಿಸಿಬಿಯಲ್ಲಿ ಅಧಿಕಾರಕ್ಕೆ ಬಂದವರೆಲ್ಲ ಅಲ್ಪ ಅವಧಿಯ ಗುರಿಗಳನ್ನು ಇಟ್ಟುಕೊಂಡಿರುತ್ತಾರೆ. ಪ್ರಥಮದರ್ಜೆ ಕ್ರಿಕೆಟ್‌ ವ್ಯವಸ್ಥೆಯ ಸುಧಾರಣೆಗೆ ಮುಂದಾಗುವುದೇ ಇಲ್ಲ. ಕಳೆದ 30 ವರ್ಷಗಳಲ್ಲಿ ಆಗಿರುವುದೇ ಇದು. ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಈಗ ಕೊನೆಗೂ ಪ್ರಥಮದರ್ಜೆ ಕ್ರಿಕೆಟ್‌ ವ್ಯವಸ್ಥೆ ಬದಲಾಗಿದ್ದು, ಅದರ ಪ್ರತಿಫಲ ಸಿಗಲು ಕನಿಷ್ಠ 3-4 ವರ್ಷ ಬೇಕು ಎಂದು ಅಕ್ರಂ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಛೋಪ್ರಾ ಅವರ 'ಆಕಾಶ್‌ವಾಣಿ' ಯ್ಯೂಟ್ಯೂಬ್‌ ಚಾನಲ್‌ನಲ್ಲಿ ಹೇಳಿದ್ದಾರೆ.

"ಭಾರತದಲ್ಲಿ ಆಗಿದ್ದೇನು? ಐಪಿಎಲ್‌ನಿಂದ ಹರಿದ ಹಣದ ಹೊಳೆಯನ್ನು ಬಿಚ್ಚು ಮನಸ್ಸಿನಿಂದ ಪ್ರಥಮದರ್ಜೆ ಕ್ರಿಕೆಟ್‌ ಸುಧಾರಣೆ ಕಡೆಗೆ ತೊಡಗಿಸಿದರು. ಕ್ರಿಕೆಟ್‌ ವ್ಯವಸ್ಥೆಯನ್ನೇ ಬದಲಾಯಿಸಿದರು. ವೇತನ ಶ್ರೇಣಿ ಬದಲಾಯಿಸಿದರು. ವೃತ್ತಿ ಪರರನ್ನು ಕರೆತಂದರು. ಭಾರತದಲ್ಲಿ ಇಂದು ಶ್ರೇಷ್ಠ ಫಿಸಿಯೋ ಮತ್ತು ತರಬೇತುದಾರರು ಇದ್ದಾರೆ. ಮಾಜಿ ಕ್ರಿಕೆಟಿಗರೆಲ್ಲ ಉತ್ತಮ ಕೋಚ್‌ಗಳಾಗಿ ಪರಿವರ್ತನೆಗೊಂಡಿದ್ದಾರೆ. ವೈಯಕ್ತಿಕ ಕೋಚ್‌ಗಳನ್ನು ತೆಗೆದುಕೊಂಡಿದ್ದಾರೆ. ಎರಡೂ ಕ್ರಿಕೆಟ್‌ ಮಂಡಳಿಗಳ ನಡುವೆ ಇರುವ ಬಹುದೊಡ್ಡ ವ್ಯತ್ಯಾಸವೇ ಇದು ಎಂದು ಅಕ್ರಮ್‌ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com