ಧೋನಿಯಂತೆ ಬ್ಯಾಟಿಂಗ್ ಮಾಡುವವರನ್ನು ಮತ್ತೆ ನೋಡಿಲ್ಲ: ಮೊಹಮ್ಮದ್ ಕೈಫ್ 

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2005ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ 123 ಎಸೆತಗಳಲ್ಲಿ 148 ರನ್‌ ಬಾರಿಸಿದ್ದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ಮೊಹಮ್ಮದ್‌ ಕೈಫ್‌ ಇದೀಗ ಸ್ಮರಿಸಿದ್ದಾರೆ.
ಮೊಹಮ್ಮದ್ ಕೈಫ್, ಧೋನಿ
ಮೊಹಮ್ಮದ್ ಕೈಫ್, ಧೋನಿ
Updated on

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2005ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ 123 ಎಸೆತಗಳಲ್ಲಿ 148 ರನ್‌ ಬಾರಿಸಿದ್ದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ಮೊಹಮ್ಮದ್‌ ಕೈಫ್‌ ಇದೀಗ ಸ್ಮರಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಕೈಫ್, "ದೇವಧರ್‌ ಟ್ರೋಫಿಯಲ್ಲಿ ನಾನು ಕೇಂದ್ರ ವಲಯದ ನಾಯಕನಾಗಿದ್ದಾಗ ಮೊದಲ ಬಾರಿ ಧೋನಿಯನ್ನು ಕಂಡೆ. ಪೂರ್ವ ವಲಯದ ಪರ ಅವರು ಆಡುತ್ತಿದ್ದರು. ಇದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡುವುದಕ್ಕೂ 2 ವರ್ಷಗಳ ಹಳೆಯ ಮಾತು. ನಾವು 360 ರನ್‌ ಗಳಿಸಿದ್ದೆವು, ಧೋನಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದೆವು. ಆದರೆ ಆ ಪಂದ್ಯದಲ್ಲಿ ಧೋನಿ 40-50 ಎಸೆತಗಳಲ್ಲಿ 80-85 ರನ್‌ಗಳನ್ನು ಚಚ್ಚಿದ್ದರು. ಆ ಸಂದರ್ಭದಲ್ಲೇ ಧೋನಿ ಅವರ ಬ್ಯಾಟಿಂಗ್‌ ವಿಭಿನ್ನ ಪಂದ್ಯವನ್ನು ಅರಿಯುವ ಚಾಣಾಕ್ಷತೆ ಅವರಲ್ಲಿದೆ ಎಂಬುದು ನನ್ನ ಅರಿವಿಗೆ ಬಂದಿತ್ತು," ಎಂದು ನೆನಪಿನಾಳವನ್ನು ಕೆದಕಿದ್ದಾರೆ.

ಇದಕ್ಕೂ ಮುನ್ನ ಭಾರತ 'ಎ' ತಂಡದ ಪರ ಧೋನಿ ಆಡುವಾಗ ಅವರನ್ನು ಟಿವಿಯಲ್ಲಿ ಕಂಡು ನನ್ನ ಸ್ನೇಹಿತನೊಬ್ಬ ಧೋನಿ ಬಗ್ಗೆ ಮೊದಲ ಬಾರಿ ಮಾತನಾಡಿದ್ದರು. ಕೂಲಿಂಗ್‌ ಗ್ಲಾಸ್‌ ತೊಟ್ಟು ವಿಕೆಟ್‌ ಕೀಪಿಂಗ್‌ ಮಾಡುತ್ತಿರುವ ಉದ್ದ ಕೂದಲಿನ ಯುವಕನಲ್ಲಿ ಏನೋ ವಿಶೇಷತೆ ಕಾಣುತ್ತಿತ್ತು. ಬಳಿಕ ಅವರೊಟ್ಟಿಗೆ ಆಡುವ ಅವಕಾಶ ನನಗೂ ಸಿಕ್ಕಿತ್ತು," ಎಂದು ಕೈಫ್ ಹೇಳಿದ್ದಾರೆ.

"ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಧೋನಿ ರನ್‌ಔಟ್‌ ಆದಾಗ ಯಾರೊಬ್ಬರಿಗೂ ಕೂಡ ಧೋನಿಯಲ್ಲಿ ಪಂದ್ಯಗಳನ್ನು ಗೆದ್ದುಕೊಡುವ ಫಿನಿಷರ್‌ ಒಬ್ಬ ಇದ್ದಾನೆ ಎಂಬುದು ಗೊತ್ತಿರಲಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಮೊದಲ ಮೂರು ಇನಿಂಗ್ಸ್‌ಗಳು ಉತ್ತಮವಾಗಿರಲಿಲ್ಲ. ಆದರೆ ವೈಜಾಗ್ ನಲ್ಲಿ ಪಾಕಿಸ್ತಾನ ವಿರುದ್ಧ ಅವರು ಅಬ್ಬರಿಸಿದ್ದರು ಎಂದಿದ್ದಾರೆ.

ಆ ಆಟವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ.ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲೇ ಅಂಥದ್ದೊಂದು ಸ್ಫೋಟಕ ಇನಿಂಗ್ಸ್‌ ಆಡಬಲ್ಲರು ಎಂದು ಯಾರೊಬ್ಬರೂ ಅಂದಾಜಿಸಿರಲಿಲ್ಲ. ಚೆಂಡನ್ನು ಬಡಿದಟ್ಟುವುದು ಇರಲಿ, ಚೆಂಡು ಎರಡು ಹೋಳಾಗುವಂತೆ ಹೊಡೆಯುವುದಕ್ಕೆ ಅದ್ಭುತ ತಾಕತ್ತು ಬೇಕು.ಪಾಕ್‌ ಬೌಲರ್‌ಗಳನ್ನು ಧೋನಿ ಅಕ್ಷರಶಃ ಚೆಂಡಾಡುತ್ತಿದ್ದರು. ಧೋನಿ ರೀತಿಯಲ್ಲಿ ಬ್ಯಾಟ್‌ ಮಾಡುವವರನ್ನು ನಾನು ಈವರೆಗೆ ಕಂಡಿಲ್ಲ. ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಮಾಡಿದ್ದು ಬಹುದೊಡ್ಡ ಸಂಗತಿ," ಎಂದು ಕೈಫ್‌ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com