ಕಾಲಿಸ್, ಸಚಿನ್, ಕೊಹ್ಲಿಯ ಬ್ಯಾಟಿಂಗ್ ವೀಕ್ಷಿಸಲು ಇಷ್ಟಪಡುತ್ತಿದ್ದೆ-ಇಯಾನ್ ಗೌಲ್ಡ್
ಲಂಡನ್: ತಾವು ಅಧಿಕೃತವಾಗಿ ಅಂಪೈರ್ ಆಗಿದ್ದಾಗ ದಕ್ಷಿಣ ಆಫ್ರಿಕಾ ಬ್ಯಾಟ್ಸಮನ್ ಜಾಕ್ ಕಾಲೀಸ್, ಭಾರತದ ಸಚಿನ್ ತೆಂಡೊಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ಆಟವನ್ನು ವೀಕ್ಷಿಸಲು ಇಷ್ಟಪಡುತ್ತಿದ್ದಾಗಿ ಇಂಗ್ಲೆಂಡ್ ನ ಮಾಜಿ ಅಂಪೈರ್ ಇಯಾನ್ ಗೌಲ್ಡ್ ಹೇಳಿದ್ದಾರೆ.
ದುರದೃಷ್ಟ, ರಿಕಿ ಪಾಂಟಿಂಗ್ ಬ್ಯಾಟಿಂಗ್ ವೀಕ್ಷಿಸಲು ಆಗಲಿಲ್ಲ, ಆದರೆ, ಅವರನ್ನು ಕೂಡಾ ಹೆಚ್ಚಿನದಾಗಿ ಇಷ್ಟಪಡುವುದಾಗಿ ಮಾಜಿ ಐಸಿಸಿ ಎಲೈಟ್ ಅಂಪೈರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾಕ್ ಕಾಲೀನ್ , ಸಚಿನ್ ತೆಂಡೊಲ್ಕರ್ ಹಾಗೂ ವಿರಾಟ್ ಕೊಹ್ಲಿ ಅದ್ಬುತ ಆಟಗಾರರು. ಆದರೆ, ದುರದೃಷ್ಟವಶಾತ್ ಇನ್ನೂ ಕೆಲವು ಆಟಗಾರರ ಬ್ಯಾಟಿಂಗ್ ವೀಕ್ಷಿಸಲು ಆಗಲಿಲ್ಲ, ರಿಕಿ ಪಾಟಿಂಗ್ ಆಟವನ್ನು ನೋಡಲಿಲ್ಲ, ಅವರೊಬ್ಬ ಆಸ್ಟ್ರೇಲಿಯಾದ ಅತ್ಯುತ್ತಮ ಬ್ಯಾಟ್ಸ್ ಮನ್, ಕ್ಯಾಪ್ಟನ್ ಆಗಿದ್ದರು ಎಂದು ಗೌಲ್ಡ್ ಹೇಳಿದ್ದಾರೆ.
ಜಾಕ್ ಕಾಲೀಸ್, ಸಚಿನ್ ಹಾಗೂ ವಿರಾಟ್ ಕೊಹ್ಲಿಯ ಆಟವನ್ನು ಕುಳಿತು ಎಲ್ಲ ದಿನ ವೀಕ್ಷಿಸಬಹುದಾಗಿತ್ತು ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇಯಾನ್ ಗೌಲ್ಡ್ 250 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಾಗಿ ಕಾರ್ಯನಿರ್ವಹಿಸಿದ್ದು, 2019ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ.


