ಐಪಿಎಲ್ 2020: ಬಯೋ ಬಬಲ್ ನಲ್ಲಿ ಮಾನಸಿಕವಾಗಿ ಕಠಿಣರಾಗಿರಬೇಕು; ಪ್ರತಿ ಆಟಗಾರನಿಗೂ ಧನ್ಯವಾದ ಹೇಳಿದ ಸೌರವ್ ಗಂಗೂಲಿ

ಐಪಿಎಲ್ 13ನೇ ಆವೃತ್ತಿ ಭರ್ಜರಿ ಯಶಸ್ಸನ್ನು ಸಾಧಿಸಿದ ಬೆನ್ನಲ್ಲೇ ಆಟಗಾರರ ಶ್ರಮಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಹೇಳಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ದುಬೈ: ಐಪಿಎಲ್ 13ನೇ ಆವೃತ್ತಿ ಭರ್ಜರಿ ಯಶಸ್ಸನ್ನು ಸಾಧಿಸಿದ ಬೆನ್ನಲ್ಲೇ ಆಟಗಾರರ ಶ್ರಮಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಹೇಳಿದ್ದಾರೆ.

ಕೊರೊನಾ ವೈಸರ್‌ನ ಆತಂಕದ ಮಧ್ಯೆ ಸಾಕಷ್ಟು ಸವಾಲುಗಳ ಮಧ್ಯೆ ಯುಎಇನಲ್ಲಿ ಈ ಬಾರಿಯ ಟೂರ್ನಿಯನ್ನು ಆಯೋಜಿಸಲಾಗಿತ್ತು. ಪ್ರೇಕ್ಷಕರ ಅನುಪಸ್ಥಿತಿಯಲ್ಲೂ ಈ ಟೂರ್ನಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯಶಸ್ಸಿನ ಸಂತಸವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ. 

ಬುಧವಾರ ಟೂರ್ನಿಯ ಯಶಸ್ಸಿನ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು, ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲು ಸಾಧ್ಯವಾಗಿಸಿದ ಎಲ್ಲಾ ಫ್ರಾಂಚೈಸಿಗಳ ಪ್ರತಿಯೊಬ್ಬ ಆಟಗಾರನಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. 

"ಬಿಸಿಸಿಐನ ಪದಾಧಿಕಾರಿಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಪ್ರತೀ ತಂಡದ ಎಲ್ಲಾ ಆಟಗಾರರಿಗೂ ಧನ್ಯವಾದಗಳು. ಕಠಿಣ ಬಯೋಬಬಲ್ ಮಧ್ಯೆಯೂ ಈ ಟೂರ್ನಿ ಯಶಸ್ವಿಯಾಗಿ ನಡೆಯುವುದನ್ನು ಸಾಧ್ಯವಾಗಿಸಿದ್ದೀರಿ. ನಿಜಕ್ಕೂ ಮಾನಸಿಕವಾಗಿ ಇದು ಕಠಿಣ. ಆದರೆ ನಿಮ್ಮ ಬದ್ಧತೆ ಭಾರತೀಯ ಕ್ರಿಕೆಟ್ ಏನು  ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com