ಟೀಂ ಇಂಡಿಯಾ ಆಟಗಾರ ಕ್ರುನಾಲ್ ಪಾಂಡ್ಯಗೆ ಸಂಕಷ್ಟ: ವಿಮಾನ ನಿಲ್ದಾಣದಲ್ಲಿ ತಡೆದ ಅಧಿಕಾರಿಗಳು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಪಟ್ಟವನ್ನು ಐದನೇ ಬಾರಿಗೆ ಗೆದ್ದ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಸಂಕಷ್ಟ ಎದುರಾಗಿದೆ.
ಕ್ರುನಾಲ್ ಪಾಂಡ್ಯ
ಕ್ರುನಾಲ್ ಪಾಂಡ್ಯ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಪಟ್ಟವನ್ನು ಐದನೇ ಬಾರಿಗೆ ಗೆದ್ದ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಸಂಕಷ್ಟ ಎದುರಾಗಿದೆ.

ಕ್ರುನಾಲ್ ಅಕ್ರಮ ಚಿನ್ನ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಾರಣೆಗಾಗಿ ನಿಲ್ಲಿಸಿಕೊಳ್ಳಲಾಗಿದೆ.

ಪಾಂಡ್ಯರಿಂದ ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಅವರನ್ನು ಪ್ರಶ್ನಿಸಿ ಹೆಚ್ಚಿನ ಚಿನ್ನ ತಂದಿದ್ದರ ಕಾಗದ ಪತ್ರಗಳನ್ನು ಕೇಳುತ್ತಿದ್ದಾರೆ. 

ನಿಯಮಗಳ ಪ್ರಕಾರ, ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸಿದ್ದವರು ಭಾರತಕ್ಕೆ ಬರುವಾಗ 50 ಸಾವಿರ ರೂಪಾಯಿಗಳವರೆಗಿನ ಚಿನ್ನವನ್ನು ಸುಂಕವಿಲ್ಲದೆ ತರಬಹುದು. ಡ್ಯೂಟಿ ಫ್ರೀ ಷರತ್ತುಗಳು ಚಿನ್ನಾಭರಣಗಳಿಗೆ ಮಾತ್ರ ಅನ್ವಯಿಸುತ್ತವೆ. ಚಿನ್ನದ ನಾಣ್ಯಗಳು ಮತ್ತು ಬಿಸ್ಕತ್ತುಗಳಲ್ಲಿ ಡ್ಯೂಟಿ ಪಾವತಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com