ಪಂದ್ಯದ ನಡುವೆ 'ಸುಸು' ಮಾಡಲು ಓಡಿ ಟ್ರೋಲ್ ಗೆ ಗುರಿಯಾದ ಪಾಕ್ ಕ್ರಿಕೆಟಿಗ!

ಕೋವಿಡ್-19 ನಿಂದಾಗಿ ಮುಂದೂಡಲ್ಪಟ್ಟಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪುನಾರಂಭಗೊಂಡಿದ್ದು, ಈಗ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿವೆ. 
ಮೊಹಮ್ಮದ್ ಹಫೀಸ್
ಮೊಹಮ್ಮದ್ ಹಫೀಸ್

ಇಸ್ಲಾಮಾಬಾದ್: ಕೋವಿಡ್-19 ನಿಂದಾಗಿ ಮುಂದೂಡಲ್ಪಟ್ಟಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪುನಾರಂಭಗೊಂಡಿದ್ದು, ಈಗ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿವೆ. 

ಶನಿವಾರದಂದು ನಡೆದ ಟೂರ್ನಮೆಂಟ್ ಎಲಿಮಿನೇಟರ್ ಪಂದ್ಯದಲ್ಲಿ ಲಾಹೋರ್ ಕ್ವಾಲ್ಯಾಂಡರ್ಸ್ ಹಾಗೂ ಪೇಷಾವರ್ ಜಲ್ಮಿ ತಂಡಗಳು ಸೆಣೆಸಿದವು, ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರ ಆಕರ್ಷಕ ಇನ್ನಿಂಗ್ಸ್ ನಿಂದಾಗಿ ಪಂದ್ಯದಲ್ಲಿ ಲಾಹೋರ್ ಗೆಲುವು ಸಾಧಿಸಿತು. 

ಆದರೆ ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯುವ ಘಟನೆಯೊಂದು ನಡೆದಿದ್ದು, ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಸುಸು (ಮೂತ್ರ ವಿಸರ್ಜನೆ) ಗಾಗಿ ಓಡಿದ್ದು ಟ್ರೋಲ್ ಗೆ ಗುರಿಯಾಗಿದ್ದಾರೆ. 

12 ನೇ ಓವರ್ ನಲ್ಲಿ ಮೊಹಮ್ಮದ್ ಹಫೀಸ್ ಡ್ರೆಸ್ಸಿಂಗ್ ರೂಮ್ ಗೆ ಓಡಿದ್ದು, ಕಾಮೆಂಟೇಟರ್ ರಮೀಝ್ ರಾಜ ಪಂದ್ಯದ ಬಳಿಕ ಕೇಳಿದ ಪ್ರಶ್ನೆಯಲ್ಲಿ ಇಮಾಮ್-ಉಲ್-ಹಕ್ ಟ್ರೋಲ್ ಮಾಡಿದ್ದು ಆತ ಎರಡು ಓವರ್ ಗಳಿಂದಲೂ ಸೂಸು ಮಾಡಬೇಕು ಎನ್ನುತ್ತಿದ್ದ ಎಂದು ಹೇಳಿ ಹಾಸ್ಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com