2020ರ ಐಪಿಲ್ ನಲ್ಲಿ ಬಿಸಿಸಿಐ ಗಳಿಸಿರುವ ಲಾಭವೆಷ್ಟು ಗೊತ್ತಾ?

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತೀಚಿಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಳಿಸಿರುವ ಲಾಭದ ಮಾಹಿತಿಯನ್ನು ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ನೀಡಿದ್ದಾರೆ.
ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್
ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತೀಚಿಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಳಿಸಿರುವ ಲಾಭದ ಮಾಹಿತಿಯನ್ನು ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ನೀಡಿದ್ದಾರೆ.

ಕೊರೋನಾ ಅವಧಿಯಲ್ಲಿ ನಡೆದ 2020ರ ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಬೋರ್ಡ್ 4 ಸಾವಿರ ಕೋಟಿ ರೂ. ಆದಾಯ ಗಳಿಸಿದ್ದು, ಟಿವಿ ವೀಕ್ಷಕರ ಪ್ರಮಾಣ ಶೇ. 25 ರಷ್ಟು ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಐಪಿಎಲ್  ಶೇ. 35 ರಷ್ಟು ಖರ್ಚು ಕಡಿಮೆಗೊಳಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ 4 ಸಾವಿರ ಕೋಟಿ ಆದಾಯ ಗಳಿಸಿದ್ದೇವೆ. ಮುಂಬೈ ಇಂಡಿಯನ್ಸ್ - ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯವನ್ನು ಅಧಿಕ ಮಂದಿ ವೀಕ್ಷಿಸಿದ್ದಾರೆ. ಐಪಿಎಲ್ ನಡೆಯಲ್ಲ ಅನ್ನುತ್ತಿದ್ದವರು ಇದೀಗ ಬಂದು ನಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ಧುಮಾಲ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಮೂರು ಕಡೆ 53 ದಿನಗಳ ಕಾಲ ನಡೆದ ಐಪಿಎಲ್ ನಲ್ಲಿ 60 ಪಂದ್ಯಗಳನ್ನಾಡಿದ್ದು, ಸುಮಾರು 30 ಸಾವಿರ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಕೋವಿಡ್-19 ಪಾಸಿಟಿವ್ ಇರುವಂತಹ ರೋಗಿಗಳಿಗಾಗಿ ಹೆಚ್ಚುವರಿಯಾಗಿ 200 ಕೊಠಡಿಗಳನ್ನು ಬುಕ್ ಮಾಡಲಾಗಿತ್ತು ಎಂದು ಧುಮಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com