ದಿನೇಶ್ ಕಾರ್ತಿಕ್ ಗೆ ಗೌತಮ್ ಗಂಭೀರ್ ನೀಡಿದ ಸಲಹೆ ಏನು ಗೊತ್ತೇ?

ಐಪಿಎಲ್-2020ಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಈ ವರೆಗೂ ಮಹತ್ವದ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿಲ್ಲ. 
ಗೌತಮ್ ಗಂಭೀರ್
ಗೌತಮ್ ಗಂಭೀರ್

ಐಪಿಎಲ್-2020ಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಈ ವರೆಗೂ ಮಹತ್ವದ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿಲ್ಲ. 

ಈ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್ ಗಂಭೀರ್ ಹಾಲಿ ನಾಯಕ ದಿನೇಶ್ ಕಾರ್ತಿಕ್ ಗೆ ಗೌತಮ್ ಗಂಭೀರ್ ಸಲಹೆ ನೀಡಿದ್ದು, ಸುನಿಲ್ ನರೈನ್ ಅವರನ್ನು ಅಗ್ರ ಕ್ರಮಾಂಕದಿಂದ ಕೈಬಿಡಬೇಕು ಹಾಗೂ ಇಯಾನ್ ಮೋರ್ಗನ್ ಮತ್ತು ಆಂಡ್ರೆ ರಸ್ಸೆಲ್ ನಂತರ ದಿನೇಶ್ ಕಾರ್ತಿಕ್ ಕ್ರೀಸ್ ಗೆ ಇಳಿಯಬೇಕೆಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಮೋರ್ಗನ್ ಗೂ ಮುನ್ನ ಆಡುತ್ತಿರುವ ಕಾರ್ತಿಕ್ ಮೂರನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ಪರ 23 ಎಸೆತಗಳಲ್ಲಿ 30 ರನ್ ಗಳಿಸಿದ್ದರು, ಆದರೆ ಗಮನಾರ್ಹವಾದ ಬ್ಯಾಟಿಂಗ್ ಸಾಧ್ಯವಾಗಿರಲಿಲ್ಲ. ಐಪಿಎಲ್-2020ಯಲ್ಲಿ ಲಯ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.

19ನೇ ಓವರ್ ನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ (1/49) ನೀಡಿ 20 ರನ್ ನೀಡಿದ್ದು ದಿನೇಶ್ ಕಾರ್ತಿಕ್ ಅವರ ತಪ್ಪು ಲೆಕ್ಕಾಚಾರ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ನಿಮ್ಮ ಅತ್ಯುತ್ತಮ ಬೌಲರ್ ಗಳು 18, 19, ಹಾಗೂ 20 ನೇ ಓವರ್ ಗಳಲ್ಲಿ ಬೌಲ್ ಮಾಡಬೇಕು ಆದರೆ ದುರದೃಷ್ಟವಶಾತ್ ಕಳೆದ ಪಂದ್ಯದಲ್ಲಿ ಅದು ಆಗಲಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com