ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡಿತ್ತು. ಹೀಗಿದ್ದರೂ ಸೋಲಿಗೆ ಕಾರಣವಾದ ಎದುರಾಳಿ ತಂಡದ ಆಟಗಾರನಿಗೆ ಎಂಎಸ್ ಧೋನಿ 200ನೇ ಪಂದ್ಯದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಮಾತ್ರ ಪೇರಿಸಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ರಾಯಲ್ಸ್ ತಂಡದ ಪರ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ಮಾಡಿ ಅಜೇಯ 70 ರನ್ ಸಿಡಿಸಿ ತಂಡಕ್ಕೆ ಗೆಲವು ತಂದುಕೊಟ್ಟಿದ್ದರು. ಹೀಗಾಗಿ ಧೋನಿ ತಮ್ಮ 200ನೇ ಐಪಿಎಲ್ ಪಂದ್ಯದ ಜೆರ್ಸಿಯನ್ನು ಪಂದ್ಯ ಶ್ರೇಷ್ಠ ಗೌರವ ಪಡೆದ ಜೋಸ್ ಬಟ್ಲರ್ ಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಪಂದ್ಯದ ಮೂಲಕ ಎಂಎಸ್ ಧೋನಿ ಐಪಿಎಲ್ ನಲ್ಲಿ 200ನೇ ಪಂದ್ಯವನ್ನಾಡಿದ ಮೊದಲಿಗ ಎಂಬ ವಿಶೇಷ ದಾಖಲೆ ಬರೆದಿದ್ದರು. ಇದೇ ಪಂದ್ಯದ ಜೆರ್ಸಿಯನ್ನು ಜೋಸ್ ಬಟ್ಲರ್ ಗೆ ನೀಡಿದ್ದಾರೆ.
Advertisement