ಸರ್ಕಾರದ ಸಂಚಲನ ನಿರ್ಣಯ: ಕ್ರಿಕೆಟ್ ದಕ್ಷಿಣ ಆಫ್ರಿಕಾ ಸಸ್ಪೆಂಡ್!

ಭ್ರಷ್ಟಾಚಾರದ ಆರೋಪದ ಮೇರೆಗೆ ದಕ್ಷಿಣ ಆಫ್ರಿಕಾ ಸರ್ಕಾರವು ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ)ವನ್ನು ಅಮಾನತುಗೊಳಿಸಿದ್ದು, ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.
ದಕ್ಷಿಣ ಆಫ್ರಿಕಾ ತಂಡ
ದಕ್ಷಿಣ ಆಫ್ರಿಕಾ ತಂಡ
Updated on

ನವದೆಹಲಿ: ಭ್ರಷ್ಟಾಚಾರದ ಆರೋಪದ ಮೇರೆಗೆ ದಕ್ಷಿಣ ಆಫ್ರಿಕಾ ಸರ್ಕಾರವು ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ)ವನ್ನು ಅಮಾನತುಗೊಳಿಸಿದ್ದು, ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ದೇಶದ ಕ್ರಿಕೆಟ್ ಆಡಳಿತ ಮಂಡಳಿಯು ಇತ್ತೀಚೆಗೆ ವರ್ಣಭೇದ ನೀತಿ, ಭ್ರಷ್ಟಾಚಾರ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

ದಕ್ಷಿಣ ಆಫ್ರಿಕಾ ಕ್ರೀಡಾ ಕಾನ್ಫೆಡೆರೇಷನ್‌ ಹಾಗೂ ಒಲಿಂಪಿಕ್‌ ಸಮಿತಿಯು(ಎಸ್‌ಎಎಸ್‌ಸಿಒಸಿ) ಸಿಎಸ್‌ಎಗೆ ಬರೆದ ಪತ್ರದಲ್ಲಿ, 'ಸಿಎಸ್‌ಎ ಮಂಡಳಿ ಮತ್ತು ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಆಡಳಿತದಿಂದ ಕೆಳಗೆ ಇಳಿಯಿರಿ' ಎಂದು ಹೇಳಿದೆ. ಆ ಮೂಲಕ ಟಾಸ್ಕ್‌ ಟೀಮ್‌ನಿಂದ ಒಂದು ತಿಂಗಳ ತನಿಖೆಗೆ ಆದೇಶಿಸಿದೆ.

ಕಳೆದ ವರ್ಷ ಡಿಸೆಂಬರ್‌ನಿಂದ ಸಂಭವಿಸಿದ ಅಸಮರ್ಪಕ ಆಡಳಿತ ಮತ್ತು ದುಷ್ಕೃತ್ಯದ ಅನೇಕ ನಿದರ್ಶನಗಳನ್ನು ದಕ್ಷಿಣ ಆಫ್ರಿಕಾ ಕ್ರೀಡಾ ಕಾನ್ಫೆಡೆರೇಷನ್‌ ಹಾಗೂ ಒಲಿಂಪಿಕ್‌ ಸಮಿತಿಯ(ಎಸ್‌ಎಎಸ್‌ಸಿಸಿ) ಆರೋಪಿಸುತ್ತಿದೆ. ಇದು ಮಂಡಳಿಯ ಸದಸ್ಯರು, ರಾಷ್ಟ್ರೀಯ ತಂಡದ ಮಾಜಿ ಮತ್ತು ಹಾಲಿ ಸದಸ್ಯರು, ಮಧ್ಯಸ್ಥಗಾರರು, ಪ್ರಾಯೋಜಕರು ಮತ್ತು ಕ್ರಿಕೆಟ್ ಪ್ರೀತಿಸುವ ಸಾರ್ವಜನಿಕರ ಸದಸ್ಯರಲ್ಲಿ ಹೆಚ್ಚಿನ ಕಾಳಜಿ ಮತ್ತು ಗೊಂದಲವನ್ನು ಉಂಟುಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

'ಇದು ಕ್ರಿಕೆಟ್‌ ಪ್ರೀತಿಸುವ ಸಾರ್ವಜನಿಕರು, ಮಧ್ಯಸ್ಥಗಾರರು, ಪ್ರಾಯೋಜಕರು ಮತ್ತು ಎಸ್‌ಎಸಿಎ(ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಮಂಡಳಿ) ಪ್ರತಿನಿಧಿಸುವ ಆಟಗಾರರ ವಿಶ್ವಾಸವನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇವೆಲ್ಲವೂ ಕ್ರಿಕೆಟ್‌ಗೆ ಅಪಖ್ಯಾತಿ ತಂದಿದೆ' ಎಂದು ಎಸ್‌ಎಎಸ್‌ಸಿಒಸಿ ಹೇಳಿದೆ.

ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಯ ಮೇಲೆ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಐಸಿಸಿ ನಿಯಮ ಹೇಳುತ್ತದೆ. ಹೀಗೆ ಮಾಡಿದರೆ ತಂಡವು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ. ಇತ್ತೀಚೆಗೆ ಜಿಂಬಾಬ್ವೆಯ ನಂತರ ಅಮಾನತು ಶಿಕ್ಷೆ ಎದುರಿಸುತ್ತಿರುವ ಎರಡನೇ ದೇಶ ದಕ್ಷಿಣ ಆಫ್ರಿಕಾವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com