ರೈನಾ, ಭಜ್ಜಿ ಅನುಪಸ್ಥಿತಿ ಕಾಡಲಿದ್ದು, ಧೋನಿ ಒತ್ತಡವನ್ನು ನಿಭಾಯಿಸಬಲ್ಲರು: ಶ್ರೀಕಾಂತ್

ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ದು, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒತ್ತಡವನ್ನು ನಿಭಾಯಿಸಲಿದ್ದು ಮತ್ತು ಚೆನ್ನೈ ಅನ್ನು ಮತ್ತೊಮ್ಮೆ ಪ್ಲೇಆಫ್‌ಗೆ ಕರೆದೊಯ್ಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
ಧೋನಿ-ಸುರೇಶ್ ರೈನಾ
ಧೋನಿ-ಸುರೇಶ್ ರೈನಾ
Updated on

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ದು, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒತ್ತಡವನ್ನು ನಿಭಾಯಿಸಲಿದ್ದು ಮತ್ತು ಚೆನ್ನೈ ಅನ್ನು ಮತ್ತೊಮ್ಮೆ ಪ್ಲೇಆಫ್‌ಗೆ ಕರೆದೊಯ್ಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ರೈನಾ ಮನೆಗೆ ಮರಳಿದರು. ಕೆಲವು ದಿನಗಳ ನಂತರ, ತಂಡದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವೈಯಕ್ತಿಕ ಕಾರಣಗಳಿಂದ ಐಪಿಎಲ್ ನಿಂದ ಹಿಂದೆ ಸರಿಯಲು ನಿರ್ಧರಿಸಿದರು. ರೈನಾ ತಂಡಕ್ಕೆ ಸಾಕಷ್ಟು ನೆರವಾಗುತ್ತಿದ್ದರು. ಇವರ ಅನುಪಸ್ಥಿತಿ ತಂಡಕ್ಕೆ ಕೊಂಚ ಕಾಡಲಿದೆ ಎಂದು ಶ್ರೀಕಾಂತ್ ನಂಬಿದ್ದಾರೆ.

ಸಿಎಸ್‌ಕೆಗೆ ಇದು ಎರಡು ದೊಡ್ಡ ಹೊಡೆತಗಳು. ಇಂತಹ ದೊಡ್ಡ ಹೊಡೆತದ ತಂಡ ಈಗ ಧೋನಿಯ ಕೈಯಲ್ಲಿದೆ. ಅವರು ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಅವರು ಸಂದರ್ಭಗಳನ್ನು ಚೆನ್ನಾಗಿ ನೋಡಿದ್ದಾರೆ. ಎಂತಹ ಪರಿಸ್ಥಿತಿಯಲ್ಲಿಯೂ ಅವರು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಶ್ರೀಕಾಂತ್ ಹೇಳಿದರು.

ಸಿಎಸ್‌ಕೆ-ಯುಎಇಗೆ ಇಳಿದಾಗಿನಿಂದಲೂ ಕಷ್ಟದ ಸಮಯಗಳನ್ನು ಎದುರಿಸಿದೆ. ಇದರ ನಡುವೆ ಇಬ್ಬರು ಹಿರಿಯ ಆಟಗಾರರು ತಂಡದಿಂದ ಹೊರ ಬಂದಿದ್ದರು. ಇದೇ ವೇಳೆ ಒಂದೆರಡು ಆಟಗಾರರು ಮತ್ತು 13 ಸಹಾಯಕ ಸಿಬ್ಬಂದಿಗಳು ಕೊರೋನಾವೈರಸ್ ಗೆ ತುತ್ತಾಗಿದ್ದರು. ಈ ಎಲ್ಲಾ ಹೊಡೆತಗಳಿಂದ ತಂಡ ಸದ್ಯ ಹೊರಬಂದಿದೆ. ಧೋನಿ ನೇತೃತ್ವದ ತಂಡವು ಸೆಪ್ಟೆಂಬರ್19 ರಂದು ಟೂರ್ನಿಯ ಉದ್ಘಾಟನೆಯ ಪಂದ್ಯವಾಡಲಿದೆ.

ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಬದಲಿ ಆಟಗಾರರನ್ನು ಇನ್ನೂ ಘೋಷಿಸಲಾಗಿಲ್ಲ. 53 ದಿನಗಳ ಪಂದ್ಯಾವಳಿಯನ್ನು ಅಬುಧಾಬಿ, ಶಾರ್ಜಾ ಮತ್ತು ದುಬೈ ಎಂಬ ಮೂರು ನಗರಗಳಲ್ಲಿ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com