ಯುವರಾಜ್ ಸಿಂಗ್ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!

ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಉತ್ತರಿಸಲು ಹೆಣಗಾಡಿದ್ದಾರೆ. 
ರೋಹಿತ್-ಯುವಿ
ರೋಹಿತ್-ಯುವಿ

ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಉತ್ತರಿಸಲು ಹೆಣಗಾಡಿದ್ದಾರೆ. 

ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮಾ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮಾತನಾಡಿದ್ದರು. ಈ ವೇಳೆ ಇಬ್ಬರು ಟೀಂ ಇಂಡಿಯಾ ಮತ್ತು ಕ್ರಿಕೆಟ್ ಬಗ್ಗೆ ಸಾಕಷ್ಟು ಚರ್ಚಿಸಿದರು. ಇದೇ ವೇಳೆ ಯುವ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಲು ರೋಹಿತ್ ಶರ್ಮಾ ಹೆಣಗಾಡಿದರು.

ಹೌದು, ಯುವಿ ಅವರು ರೋಹಿತ್ ಶರ್ಮಾಗೆ ನಿಮ್ಮ ಮುಂದಿನ ಕ್ರಿಕೆಟ್ ಜೀವನದ ಬಗ್ಗೆ ಏನಾದರೂ ಆಲೋಚನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ದಿಢೀರ್ ಅಂತ ಬಂದ ಈ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರಸದೆ ಸುಮ್ಮನಾದರು.  

ಕೊರೋನಾ  ಮಹಾಮಾರಿಯಿಂದ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಲೈವ್ ಚಾಟಿಂಗ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com