ಎರಡನೇ ಟೆಸ್ಟ್: ಇನ್ನಿಂಗ್ಸ್, 12 ರನ್ ಗಳ ಜಯದೊಂದಿಗೆ ವಿಂಡೀಸ್ ವಿರುದ್ಧ ಕ್ಲೀನ್ ಸ್ವಿಪ್ ಸಾಧಿಸಿದ ಕಿವೀಸ್

ನ್ಯೂಜಿಲೆಂಡ್ ತಂಡದ ಅನುಭವಿ ವೇಗದ ಬೌಲರ್ ಗಳ ಶಿಸ್ತು ಬದ್ಧ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಹಾಗೂ 12 ರನ್ ಗಳಿಂದ ಸೋಲು ಕಂಡಿದ್ದು, ಸರಣಿಯನ್ನು 2-0ಯಿಂದ ಕ್ಲೀನ್ ಸ್ವಿಪ್ ಸಾಧನೆ ಮಾಡಿದೆ.
ನ್ಯೂಜಿಲ್ಯಾಂಡ್ ತಂಡ
ನ್ಯೂಜಿಲ್ಯಾಂಡ್ ತಂಡ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ಅನುಭವಿ ವೇಗದ ಬೌಲರ್ ಗಳ ಶಿಸ್ತು ಬದ್ಧ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಹಾಗೂ 12 ರನ್ ಗಳಿಂದ ಸೋಲು ಕಂಡಿದ್ದು, ಸರಣಿಯನ್ನು 2-0ಯಿಂದ ಕ್ಲೀನ್ ಸ್ವಿಪ್ ಸಾಧನೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 460 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ 131 ರನ್ ಗಳಿಗೆ ಸರ್ವಪತನ ಕಂಡಿತು. ಫಾಲೋಆನ್ ಗೆ ಸಿಲುಕಿದ ವಿಂಡೀಸ್ ಮತ್ತೆ ಬ್ಯಾಟಿಂಗ್ ಆರಂಭಿಸಿದ್ದು 317 ರನ್ ಗಳಿಗೆ ಆಲೌಟ್ ಆಯಿತು. 

ನ್ಯೂಜಿಲ್ಯಾಂಡ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಹೆನ್ರಿ ನಿಕೋಲಾಸ್ 174 ರನ್ ಬಾರಿಸಿದ್ದರು. ಇನ್ನು ವಿಲ್ ಯೂಂಗ್ 43, ಮಿಚೆಲ್ 42, ವಾಗ್ನೆರ್ ಅಜೇಯ 66 ರನ್ ಪೇರಿಸಿದ್ದು ನ್ಯೂಜಿಲ್ಯಾಂಡ್ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. 

ಇನ್ನು ವಿಂಡೀಸ್ ಪರ ಮೊದಲ ಇನ್ನಿಂಗ್ಸ್ ನಲ್ಲಿ ಜೆರ್ಮೈನ್ ಬ್ಲಾಕ್ ವುಡ್ 69 ರನ್ ಸಿಡಿಸಿದ್ದು ಬಿಟ್ಟರೇ ಮತ್ಯಾರು ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದರು. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ನ್ಯೂಜಿಲ್ಯಾಂಡ್ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ವಿಂಡೀಸ್ ತತ್ತರಿಸಿತ್ತು.

ಜಾನ್ ಕ್ಯಾಂಪ್ ಬೆಲ್ 68, ಬ್ರಾರ್ಥ್ವೈಟ್ 24, ಬ್ರೋರ್ಕ್ 36, ಜೋಸನ್ ಹೋಲ್ಡರ್ 61, ಜೋಶ್ವಾ ಡಾ ಸಿಲ್ವಾ 57 ರನ್ ಬಾರಿಸಿ ತಂಡ 317 ರನ್ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ನ್ಯೂಜಿಲ್ಯಾಂಡ ಪರ ಬೌಲಿಂಗ್ ನಲ್ಲಿ ಟಿಮ್ ಸೌಥಿ ಎರಡು ಇನ್ನಿಂಗ್ಸ್ ನಲ್ಲಿ 7, ಜಮೈಸನ್ 7, ಟ್ರೆಂಟ್ ಬೊಲ್ಟ್ 3, ವಾಗ್ನೆರ್ 3 ವಿಕೆಟ್ ಪಡೆದಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com