ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿಗೆ ಪಾಕ್ ಪೌರತ್ವ ಖಚಿತಪಡಿಸಿದ ಪಿಸಿಬಿ 

ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿಗೆ ಪೌಕಿಸ್ತಾನ  ಪೌರತ್ವ ದೊರೆಯುವುದನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಶನಿವಾರ ಖಚಿತಪಡಿಸಿದೆ. 
ಡರೇನ್ ಸ್ಯಾಮಿ
ಡರೇನ್ ಸ್ಯಾಮಿ

ಇಸ್ಲಾಮಾಬಾದ್ : ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿಗೆ ಪೌಕಿಸ್ತಾನ  ಪೌರತ್ವ ದೊರೆಯುವುದನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಶನಿವಾರ ಖಚಿತಪಡಿಸಿದೆ. 

ಪಾಕಿಸ್ತಾನದಲ್ಲಿ ಕ್ರಿಕೆಟ್ ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಡರೇನ್ ಸ್ಯಾಮಿಗೆ  ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ  ಪಾಕ್ ಪೌರತ್ವ ನೀಡಲಿದ್ದಾರೆ.

ಪಾಕಿಸ್ತಾನದಲ್ಲಿ ಕ್ರಿಕೆಟ್ ಗಾಗಿ ಸಲ್ಲಿಸಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ ಮಾರ್ಚ್ 23 ರಂದು ಡರೇನ್ ಸ್ಯಾಮಿಗೆ ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ  ಪಾಕ್  ಪೌರತ್ವವನ್ನು ನೀಡಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟ್ವೀಟ್ ಮಾಡಿದೆ.

ಪಾಕಿಸ್ತಾನದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದ ಡರೇನ್ ಸ್ಯಾಮಿ ಪಾಕಿಸ್ತಾನದ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಮಿಂಚಿದ್ದರು.  ಉದ್ಯಮಿ ಜಾವೆದ್ ಅಫ್ರಿದಿ ಮಾಲೀಕತ್ವದ ಪೇಶ್ವರ್ ಜಲ್ಮಿ ತಂಡದಲ್ಲಿ ಡ್ಯಾರೆನ್ ನಾಯಕರಾಗಿದ್ದು, ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಯಾಮಿ 30 ರನ್ ಗಳಿಸಿದ್ದರು.

36 ವರ್ಷದ ಸ್ಯಾಮಿ ವೆಸ್ಟ್ ಇಂಡೀಸ್ ಪರ  38 ಟೆಸ್ಟ್, 126 ಏಕದಿನ ಹಾಗೂ 68 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿದ್ದಾರೆ.  ಸ್ಯಾಮಿ ನಾಯಕತ್ವದ ವೆಸ್ಟ್ ಇಂಡೀಸ್ 2016ರಲ್ಲಿ ಟಿ-20 ವಿಶ್ವಕಪ್ ಗೆದ್ದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com