ಎಂ ಎಸ್ ಧೋನಿ ಇನ್ನು ಮುಂದೆ ಭಾರತ ತಂಡಕ್ಕೆ ಆಡಬಹುದು ಎಂದು ನನಗೆ ಅನಿಸುವುದಿಲ್ಲ: ಹರ್ಭಜನ್ ಸಿಂಗ್ 

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್ನು ಭಾರತ ತಂಡ ಪರವಾಗಿ ಆಡುವುದು ಸಂಶಯ ಎಂದು ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂ ಎಸ್ ಧೋನಿ ಇನ್ನು ಮುಂದೆ ಭಾರತ ತಂಡಕ್ಕೆ ಆಡಬಹುದು ಎಂದು ನನಗೆ ಅನಿಸುವುದಿಲ್ಲ: ಹರ್ಭಜನ್ ಸಿಂಗ್ 

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್ನು ಭಾರತ ತಂಡ ಪರವಾಗಿ ಆಡುವುದು ಸಂಶಯ ಎಂದು ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


2019ರ ವಿಶ್ವಕಪ್ ವರೆಗೆ ಆಟವಾಡುತ್ತೇನೆ ಎಂದು ಧೋನಿಯವರು ನಿರ್ಧರಿಸಿದ್ದರಿಂದ ಅವರು ಇನ್ನು ಭಾರತ ತಂಡಕ್ಕೆ ಆಟವಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.


ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಐಪಿಎಲ್ ಗೆ ಧೋನಿಯವರು ತಯಾರಿ ಮಾಡುತ್ತಿರಬಹುದು ಎಂದು ಹೇಳಿದರು. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶ ತೋರಿದರೆ ಟ್ವಂಟಿ20 ತಂಡಕ್ಕೆ ಧೋನಿಯವರು ಆಡಬಹುದೇ ಎಂದು ಕೇಳಿದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ನಲ್ಲಿ ಧೋನಿಯವರು ಉತ್ತಮ ಆಟಗಾರರಾಗಲಿದ್ದಾರೆ. ಅಲ್ಲಿ ಉತ್ತಮವಾಗಿ ಆಡಿದರೂ ಕೂಡ ನಂತರ ಭಾರತ ತಂಡದ ಪರವಾಗಿ ಅವರು ಆಟವಾಡುತ್ತಾರೆ ಎಂದು ನನಗನಿಸುವುದಿಲ್ಲ ಎಂದರು.


ನಿನ್ನೆ ಬಿಸಿಸಿಐ, 2019-2020ರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಧೋನಿ ಯಾವುದೇ ವಿಭಾಗದಲ್ಲಿ ಸ್ಥಾನ ಪಡೆದಿಲ್ಲ. 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಧೋನಿ ಸಂಪೂರ್ಣವಾಗಿ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ ಮತ್ತು ನಿವೃತ್ತಿಯ ಬಗ್ಗೆ ಮೌನ ತಾಳಿದ್ದಾರೆ.


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತ ತಂಡದಿಂದ ಸಂಪೂರ್ಣ ಕೈಬಿಟ್ಟಿಲ್ಲ. ಈ ಅವಧಿಯಲ್ಲಿ ಯಾವುದೇ ಪಂದ್ಯಗಳನ್ನು ಆಡಿಲ್ಲದ ಕಾರಣ ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅರ್ಹತೆ ಪಡೆದಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com