ಕನ್ನಡಿಗ ಮನೀಶ್ ಪಾಂಡೆ 'ಫೇಕ್ ಫೀಲ್ಡಿಂಗ್' ಎಡವಟ್ಟು, ಅಂಪೈರ್ ಕಣ್ಣಿಗೆ ಬೀಳಲಿಲ್ಲ: ವಿಡಿಯೋ ವೈರಲ್

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಅದ್ಭುತ ಫೀಲ್ಡರ್ ಕನ್ನಡಿಗ ಮನೀಶ್ ಪಾಂಡೆ ಫೇಕ್ ಫೀಲ್ಡಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಅದ್ಭುತ ಫೀಲ್ಡರ್ ಕನ್ನಡಿಗ ಮನೀಶ್ ಪಾಂಡೆ ಫೇಕ್ ಫೀಲ್ಡಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಕ್ಲೆಂಡ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿತ್ತು. ಇನ್ನಿಂಗ್ಸ್ ನ 20ನೇ ಓವರ್ ಅನ್ನು ಜಸ್ ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದ್ದು ಮೊದಲ ಎಸೆತದಲ್ಲೇ ರಾಸ್ ಟೇಲರ್ ಚೆಂಡನ್ನು ಡೀಪ್ ಮಿಡ್ ವಿಕೆಟ್ ನತ್ತ ಬಾರಿಸಿದರು. 

ಈ ಸಂದರ್ಭದಲ್ಲಿ ಫೀಲ್ಡಿಂಗ್ ನಲ್ಲಿದ್ದ ಮನೀಶ್ ಪಾಂಡೆ ಚೆಂಡನ್ನು ಹಿಡಿಯಲು ವಿಫಲರಾಗಿದ್ದರೂ ಚೆಂಡನ್ನು ಎಸೆಯುವಂತೆ ಆಕ್ಷನ್ ಮಾಡಿದರು. ಇದರಿಂದ ಬ್ಯಾಟ್ಸ್ ಮನ್ ಗಳು ಒಂದು ರನ್ ಗೆ ಸುಮ್ಮನಾದರು. ಇದನ್ನು ಅಂಪೈರ್ ಗಳು ಗಮನಿಸಲಿಲ್ಲ.

ಆದರೆ ಕ್ರಿಕೆಟ್ ನಿಯಮದ ಪ್ರಕಾರ ಈ ರೀತಿ ಮಾಡುವಂತಿಲ್ಲ. ಆಗೇನಾದರೂ ಅಂಪೈರ್ ಇದನ್ನು ಗಮನಿಸಿದ್ದರೆ ನ್ಯೂಜಿಲ್ಯಾಂಡ್ ತಂಡಕ್ಕೆ 5 ರನ್ ಹೆಚ್ಚುವರಿಯಾಗಿ ನೀಡಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com