ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿಯೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ರವಿ ಯಾದವ್

ಮಧ್ಯ ಪ್ರದೇಶ ಮಧ್ಯಮ ಕ್ರಮಾಂಕದ ಬೌಲರ್ ರವಿ ಯಾದವ್ ಚೊಚ್ಚಲ ಪ್ರಥಮ ದರ್ಜೆ ಪಂದ್ಯದ ಮೊದಲ ಓವರ್‌ನಲ್ಲಿಯೇ ಹಾಟ್ರಿಕ್ ವಿಕೆಟ್ ಪಡೆದು ನೂತನ ದಾಖಲೆ ಮಾಡಿದ್ದಾರೆ.
ರವಿ ಯಾದವ್
ರವಿ ಯಾದವ್

ನವದೆಹಲಿ: ಮಧ್ಯ ಪ್ರದೇಶ ಮಧ್ಯಮ ಕ್ರಮಾಂಕದ ಬೌಲರ್ ರವಿ ಯಾದವ್ ಚೊಚ್ಚಲ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಂದ್ಯದ ಮೊದಲ ಓವರ್‌ನಲ್ಲಿಯೇ ಹಾಟ್ರಿಕ್ ವಿಕೆಟ್ ಪಡೆದು ನೂತನ ದಾಖಲೆ ಮಾಡಿದ್ದಾರೆ. ಇದರೊಂದಿಗೆ ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಪದಾರ್ಪಣೆ ಪಂದ್ಯದ ಮೊದಲ ಓವರ್‌ನಲ್ಲೇ ಈ ಸಾಧನೆ ಮಾಡಿದ ಮೊಟ್ಟ ಮೊದಲ ಬೌಲರ್ ಎಂಬ ಸಾಧನೆಗೆ ರವಿ ಯಾದವ್ ಭಾಜನರಾಗಿದ್ದಾರೆ.

ಇಂದೋರ್ ಹೋಲ್ಕರ್ ಕ್ರಿಕೆಟ್ ಕ್ರಿಡಾಂಗಣದಲ್ಲಿ ಉತ್ತರ ಪ್ರದೇಶ ವಿರುದ್ಧದ 2019/20ನೇ ಆವೃತ್ತಿಯ ಪಂದ್ಯದಲ್ಲಿ ಅವರು  ಈ ವಿಶಿಷ್ಠ ಸಾಧನೆ ಮಾಡಿದರು. ಒಟ್ಟಾರೆ, ಇವರು ಐದು ವಿಕೆಟ್ ಗೊಂಚಲು ತನ್ನ ಖಾತೆಗೆ ಹಾಕಿಕೊಂಡರು. ಗಾಯದಿಂದಾಗಿ ತಡವಾಗಿ ಮಧ್ಯ ಪ್ರದೇಶ ತಂಡಕ್ಕೆ ಪ್ರವೇಶಿಸಿದ ರವಿ ಯಾದವ್ ಅವರ ಹ್ಯಾಟ್ರಿಕ್‌ಗೆ ಆರ್ಯನ್ ಜುಯೆಲ್, ಅಂಕಿತ್ ರಜಪೂತ್ ಹಾಗೂ ಸಮೀರ್ ರಿಜ್ವಿ ಅವರು ಬಲಿಯಾದರು. ಒಟ್ಟಾರೆ, ಉತ್ತರ ಪ್ರದೇಶ ಪ್ರಥಮ ಇನಿಂಗ್ಸ್‌ ನಲ್ಲಿ 216 ರನ್ ಗಳಿಗೆ ಆಲೌಟ್ ಆಯಿತು. ಸೌರಭ್ ಕುಮಾರ್ ಅಜೇಯ 98 ರನ್ ಹಾಗೂ ರಿಂಕು ಸಿಂಗ್ 53 ರನ್ ಗಳಿಸಿದರು.

ರವಿ ಯಾದವ್ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ತಮ್ಮ ಹ್ಯಾಟ್ರಿಕ್ ಅಭಿಯಾನ ಆರಂಭಿಸಿದರು.

ಮೊದಲನೇ ವಿಕೆಟ್ ಗೆ ಆರ್ಯನ್ ಜುಯೆನ್ ಅವರು ವಿಕೆಟ ಕೀಪರ್ ಅಜಯ್ ರಾಥೋಡ್ ಅವರಿಗೆ ಕೀಪರ್ ಕ್ಯಾಚ್ ನೀಡಿದರು. ನಂತರ ಎಸೆತ ಪರಿಣಾಮಕಾರಿ ಎಸೆತಗಳಿಗೆ ರಜಪೂತ್ ಹಾಗೂ ರಿಜ್ವಿ ಕ್ಲೀನ್ ಬೌಲ್‌ಡ್‌ ಆದರು.

ಇದಕ್ಕೂ ಮುನ್ನ ಮಧ್ಯೆ ಪ್ರದೇಶ ತಂಡ ಪ್ರಥಮ ಇನಿಂಗ್ಸ್‌‌ನಲ್ಲಿ 230 ರನ್ ಗಳಿಗೆ ಆಲೌಟ್ ಆಗಿತ್ತು. ಯಶ್ ದುಬೆ ಅರ್ಧಶತಕ ಬಾರಿಸಿದ್ದರು. ನಂತರ, ದ್ವಿತೀಯ ಇನಿಂಗ್‌ಸ್‌ ಆರಂಭಿಸಿದ ಮಧ್ಯೆೆ ಪ್ರದೇಶ ತಂಡ ಎರಡನೇ ದಿನದ ಮುಕ್ತಾಯಕ್ಕೆ 34 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. ಆ ಮೂಲಕ 119 ರನ್ ಮುನ್ನಡೆ ಪಡೆದಿದೆ. ಕ್ರೀಸ್‌ನಲ್ಲಿ ನಮನ್ ಓಜಾ (20) ಹಾಗೂ ಯಶ್ ದುಬೆ (4) ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com