ಡೇ & ನೈಟ್ ಟೆಸ್ಟ್ ಮ್ಯಾಚ್ ಗಳಿಗೆ ಹೆಚ್ಚು ಪ್ರಾಶಸ್ತ್ಯ: ಬಿಸಿಸಿಐ ಅಧ್ಯಕ್ಷ ಗಂಗೂಲಿ ನಡೆಗೆ ಇದೇನಾ ಕಾರಣ?

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪದಗ್ರಹಣ ಮಾಡಿದಾಗಿನಿಂದಲೂ ಕ್ರಿಕೆಟ್ ಆವೃತ್ತಿಗಳಲ್ಲಿ ಬದಲಾವಣೆಗಳನ್ನು ತರಲು ಉತ್ಸುಕರಾಗಿದ್ದಾರೆ. ಇವುಗಳಲ್ಲಿ ಡೇ&ನೈಟ್ ಟೆಸ್ಟ್ ಪಂದ್ಯಗಳು ಪ್ರಮುಖವಾದದ್ದು.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪದಗ್ರಹಣ ಮಾಡಿದಾಗಿನಿಂದಲೂ ಕ್ರಿಕೆಟ್ ಆವೃತ್ತಿಗಳಲ್ಲಿ ಬದಲಾವಣೆಗಳನ್ನು ತರಲು ಉತ್ಸುಕರಾಗಿದ್ದಾರೆ. ಇವುಗಳಲ್ಲಿ ಡೇ&ನೈಟ್ ಟೆಸ್ಟ್ ಪಂದ್ಯಗಳು ಪ್ರಮುಖವಾದದ್ದು.

ಭಾರತ ತಂಡದ ಮಾಜಿ ನಾಯಕರೂ ಆಗಿರುವ ಸೌರವ್ ಗಂಗೂಲಿ ಟೆಸ್ಟ್ ಆವೃತ್ತಿಯ ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಗಳಾಗಬೇಕು, ಟೆಸ್ಟ್ ಆವೃತ್ತಿಯನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಬೇಕೆಂಬ ಯೋಜನೆ ಹೊಂದಿದ್ದು, ಕೋಲ್ಕತ್ತಾದಲ್ಲಿ ಭಾರತ-ಬಾಂಗ್ಲಾ ನಡುವೆ ನಡೆದ ಮೊದಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯದ ಮೂಲಕ ಇದು ಸಾಕಾರಗೊಂಡಿದೆ.

ಟೆಸ್ಟ್ ಆವೃತ್ತಿಯನ್ನು ವೀಕ್ಷಿಸಲು ಹೆಚ್ಚು ಜನ ಸೇರುವಂತಾಗಬೇಕು ಎಂಬುದು ಗಂಗೂಲಿ ಹೊನಲು-ಬೆಳಕಿನ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರ ಹಿಂದಿನ ಕಾರಣವಾಗಿದೆ. "ಕಳೆದ ವರ್ಷ ಈಡನ್ ಗಾರ್ಡನ್ ನಲ್ಲಿ ನಡೆದ ಭಾರತ-ಬಾಂಗ್ಲಾದೇಶದ ನಡುವಿನ ಪಿಂಕ್ ಬಾಲ್ ಟೆಸ್ಟ್ (ಹೊನಲು-ಬೆಳಕಿನ) ಗೆ ಹೆಚ್ಚಿನ ಜನ ಸೇರಿದ್ದರು. 

ಟೆಸ್ಟ್ ಸರಣಿಯಲ್ಲಿ ಒಂದು ಡೇ& ನೈಟ್ ಪಂದ್ಯ ನಡೆಯುವುದು ಮುಖ್ಯ, ಏಕೆಂದರೆ ಕ್ರಿಕೆಟ್ ಮೈದಾನಗಳತ್ತ ಜನರನ್ನು ಆಕರ್ಷಿಸಬೇಕಿದೆ ಎಂದು ಬಿಸಿಸಿಐ ವೆಬ್ ಸೈಟ್ ನಲ್ಲಿ ಮಯಾಂಕ್ ಅಗರ್ವಾಲ್ ಜೊತೆಗಿನ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯ 5 ದಿನಗಳ ಕಾಲ ನಡೆಯುತ್ತಿತ್ತು, ಕೇವಲ ಮೂರು ದಿನಗಳಲ್ಲಿ 3,50,000 ಜನರು ಕ್ರೀಡಾಂಗಣಕ್ಕೆ ಬಂದಿದ್ದರು" ಎಂದು ಗಂಗೂಲಿ ಹೇಳಿದ್ದಾರೆ. ಟೆಸ್ಟ್ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಜಾರಿಗೆ ತರಲು ಐಸಿಸಿ ಸಹ ಚಿಂತನೆ ನಡೆಸಿದ್ದು ಟೆಸ್ಟ್ ಪಂದ್ಯಗಳನ್ನು 5 ದಿನಗಳ ಬದಲಿಗೆ 4 ದಿನಗಳಿಗೆ ಇಳಿಕೆ ಮಾಡುವ ಸಲಹೆ ನೀಡಿತ್ತು. ಆದರೆ ಗಂಗೂಲಿ ತಾವು ಈ ಚಿಂತನೆಯ ಪರವಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಈ ವರ್ಷಾಂತ್ಯದ ವೇಳೆಗೆ ಆಸ್ಟ್ರೇಲಿಯಾ-ಭಾರತ ನಡುವೆ ನಡೆಯಲಿರುವ ಎರಡನೇ ಟೆಸ್ಟ್ ಸರಣಿಯಲ್ಲಿ ಹೊನಲು-ಬೆಳಕಿನ ಪಂದ್ಯ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com