ಭುವನೇಶ್ವರ್ ಕುಮಾರ್‌ ಮೊದಲ ಸಂಬಳ ಪಡೆದಿದ್ದು ಕೇವಲ 3 ಸಾವಿರ ಮಾತ್ರ! 

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇದೇ ವರ್ಷ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಗುತ್ತಿಗೆ ಪಟ್ಟಿಯಲ್ಲಿ ಟೀಮ್‌ ಇಂಡಿಯಾ ಸ್ವಿಂಗ್‌ ಮಸ್ಟರ್‌ ಭುವನೇಶ್ವರ್‌ ಕುಮಾರ್‌ 'ಎ' ಶ್ರೇಣಿ ಪಡೆದಿದ್ದರು.
ಭುವನೇಶ್ವರ್ ಕುಮಾರ್‌ ಮೊದಲ ಸಂಬಳ ಪಡೆದಿದ್ದು ಕೇವಲ 3 ಸಾವಿರ ಮಾತ್ರ!
ಭುವನೇಶ್ವರ್ ಕುಮಾರ್‌ ಮೊದಲ ಸಂಬಳ ಪಡೆದಿದ್ದು ಕೇವಲ 3 ಸಾವಿರ ಮಾತ್ರ!

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇದೇ ವರ್ಷ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಗುತ್ತಿಗೆ ಪಟ್ಟಿಯಲ್ಲಿ ಟೀಮ್‌ ಇಂಡಿಯಾ ಸ್ವಿಂಗ್‌ ಮಸ್ಟರ್‌ ಭುವನೇಶ್ವರ್‌ ಕುಮಾರ್‌ 'ಎ' ಶ್ರೇಣಿ ಪಡೆದಿದ್ದರು.

ಯುವ ಪ್ರತಿಭೆಯಾಗಿ ಭಾರತ ತಂಡ ಪ್ರತಿನಿಧಿಸಿದ ಭುವಿ, ತಮ್ಮ ಸ್ವಿಂಗ್‌ ಬೌಲಿಂಗ್‌ ಮೂಲಕ ಉತ್ತಮ ಪ್ರದರ್ಶನದೊಂದಿಗೆ ಹಂತ ಹಂತವಾಗಿ ಗುತ್ತಿಗೆ ಪಟ್ಟಿಯಲ್ಲಿ ಏರಿಕೆ ಕಂಡರು. ಬಿಸಿಸಿಐ ಗುತ್ತಿಗೆ 'ಎ' ಶ್ರೇಣಿಯಲ್ಲಿ ಭುವನೇಶ್ವರ್ ಕುಮಾರ್ ವಾರ್ಷಿಕ 5 ಕೋಟಿ ರೂ. ಗಳನ್ನು ಪಡೆದುಕೊಳ್ಳುತ್ತಾರೆ. 

ಆದರೆ, ಅವರು ವೃತ್ತಿ ಜೀವನದ ಪಡೆದ ಮೊದಲ ಸಂಬಳ ಎಷ್ಟೆಂದೂ ಕೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರೆಂಟಿ! ತಮ್ಮ ಅಧಿಕೃತ ಟ್ವೀಟರ್‌ನಲ್ಲಿ ಅಭಿಮಾನಿಯೊಬ್ಬರು ಮೊದಲ ಸಂಬಳ ಎಷ್ಟು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭುವನೇಶ್ವರ್‌ ಕುಮಾರ್‌, "ವೃತ್ತಿ ಜೀವನದ ಮೊದಲನೇ ಸಂಬಳ 3,000 ರೂ. ಅದರಲ್ಲಿ ಸ್ವಲ್ಪ ಹಣವನ್ನು ಶಾಪಿಂಗ್‌ಗೆ ಖರ್ಚು ಮಾಡಿದ್ದು, ಇನ್ನುಳಿದ ಮೊತ್ತವನ್ನು ಹಾಗೆಯೇ ಉಳಿಸಿದ್ದೇನೆ," ಎಂದು ಹೇಳಿದರು. 

2012ರಂದು ಇದೇ ದಿನ ಭುವನೇಶ್ವರ್‌ ಕುಮಾರ್ ಪಾಕಿಸ್ತಾನದ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ ಮೊದಲ ಪಂದ್ಯದಲ್ಲಿಯೇ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಇದಕ್ಕೂ ಮೊದಲು ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಅವರನ್ನು ರಣಜಿ ಟ್ರೋಫಿಯಲ್ಲಿ ಶೂನ್ಯಕ್ಕೆ ಔಟ್‌ ಮಾಡಿದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೂ ಭಾಜನವಾಗಿದ್ದರು. 2013ರ ಜುಲೈನಲ್ಲಿ ಮೂರು ರಾಷ್ಟ್ರಗಳ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಭುವಿ 8 ರನ್‌ ನೀಡಿ 4 ವಿಕೆಟ್‌ ಕಬಳಿಸಿದ್ದರು ಹಾಗೂ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಅಂದು ಒಟ್ಟು 10 ವಿಕೆಟ್‌ಗಳನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೆ, ಭಾರತ ಪ್ರಶಸ್ತಿ ಗೆದ್ದಿದ್ದ 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಆಗಿದ್ದರು. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಗಾಯದಿಂದಾಗಿ ಆಸ್ಟ್ರೇಲಿಯಾ ಏಕದಿನ ಸರಣಿ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಬಳಿಕ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರು ಕೇವಲ ಆರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com