ಕ್ರಿಕೆಟ್ ಕೂಡ ವರ್ಣಭೇದ ನೀತಿಯಿಂದ ಮುಕ್ತವಾಗಿಲ್ಲ, ನಾನೂ ಅದನ್ನು ಎದುರಿಸಿದ್ದೇನೆ: ಕ್ರಿಸ್ ಗೇಲ್ 

ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಾವೂ ಸಹ ತಮ್ಮ ವೃತ್ತಿಜೀವನದಲ್ಲಿ ಜನಾಂಗೀಯ ಟೀಕೆಗಳನ್ನು ಎದುರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗೆಯೇ ಫುಟ್ ಬಾಲ್ ಮಾತ್ರವಲ್ಲ ಕ್ರಿಕೆಟ್ ಸಹ ವರ್ಣಭೇದ ನೀತಿಯಿಂದ ಮುಕ್ತವಾಗಿಲ್ಲ ಎಂದಿದ್ದಾರೆ.
ಕ್ರಿಸ್ ಗೇಲ್
ಕ್ರಿಸ್ ಗೇಲ್

ನ'ವದೆಹಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಾವೂ ಸಹ ತಮ್ಮ ವೃತ್ತಿಜೀವನದಲ್ಲಿ ಜನಾಂಗೀಯ ಟೀಕೆಗಳನ್ನು ಎದುರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗೆಯೇ ಫುಟ್ ಬಾಲ್ ಮಾತ್ರವಲ್ಲ ಕ್ರಿಕೆಟ್ ಸಹ ವರ್ಣಭೇದ ನೀತಿಯಿಂದ ಮುಕ್ತವಾಗಿಲ್ಲ ಎಂದಿದ್ದಾರೆ.

ಗೇಲ್ ಜನಾಂಗೀಯ ಟೀಕೆಗಳನ್ನು ಎದುರಿಸಿದ ಬಗೆಯನ್ನು ವಿಸ್ತಾರವಾಗಿ ಹೇಳಿಲ್ಲ.  ಆದರೆ ಜಾಗತಿಕ ಟಿ 20 ಲೀಗ್‌ಗಳಲ್ಲಿ ಅವರ ಆಟದ ವೇಳೆ ಇಂತಹಾ ಘಟನೆ ನಡೆದಿರುವ ಬಗ್ಗೆ ಅವರು ಸುಳಿವು ಕೊಟ್ಟಿದ್ದಾರೆ. . "ನಾನು ಜಗತ್ತಿನಾದ್ಯಂತ ಪ್ರಯಾಣಿಸಿದ್ದೇನೆ ಮತ್ತು ಆ ವೇಳೆ ಜನಾಂಗೀಯ ನಿಂದನೆ, ಟೀಕೆಗಳನ್ನು ಅನುಭವಿಸಿದ್ದೇನೆ.  ಏಕೆಂದರೆ ನಾನು ಕಪ್ಪು ವರ್ಣೀಯನಿದ್ದೇನೆ. ನನ್ನ ಮಾತನ್ನು ನಂಬಿರಿ, ಈ ಪಟ್ಟಿ ಮುಂದುವರಿಯಲಿದೆ.: ಗೇಲ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

"ವರ್ಣಭೇದ ನೀತಿಯು ಫುಟ್‌ಬಾಲ್‌ನಲ್ಲಿ ಮಾತ್ರವಲ್ಲ, ಅದು ಕ್ರಿಕೆಟ್‌ನಲ್ಲಿಯೂ ಇದೆ. ಕಪ್ಪು ವರ್ಣೀಯನಾಗಿ  ತಂಡಗಳಲ್ಲಿಯೂ ಸಹ, ನಾನು ಕಡೇ ಸ್ಥಾನವನ್ನು ಅನುಭವಿಸಿದ್ದೇನೆ. ಆದರೆ ಇದೇ ಕಪ್ಪು ವರ್ಣ ನನ್ನ ಶಕ್ತಿ ಹಾಗೂ ನನ್ನ ಹೆಮ್ಮೆಯಾಗಿದೆ"ಅವರು ಹೇಳಿದರು.

ಯುಎಸ್ಎಯಲ್ಲಿ ಆಫ್ರಿಕನ್-ಅಮೇರಿಕನ್ ಜಾರ್ಜ್ ಫ್ಲಾಯ್ಡ್ ಸಾವಿನ ಹಿನ್ನೆಲೆಯಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಗೇಲ್ ಈ ಹೇಳಿಕೆ ನೀಡಿದ್ದು ಈ ಘಟನೆ ಅಮೆರಿಕಾದಾದ್ಯಂತ  ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. "ಕಪ್ಪು ವರ್ಣೀಯರ ಜೀವನವು  ಇತರ ಜೀವನದಂತೆಯೇ ಮುಖ್ಯವಾಗಿದೆ. ಕಪ್ಪು ಜನರು ಎಲ್ಲಾ ಜನಾಂಗದವರಂತೆಯೇ ಇದ್ದು ಅವರನ್ನು ಮೂರ್ಖರೆಂದು ಕರೆಯುವುದನ್ನು ನಿಲ್ಲಿಸಿ ಅವರಲ್ಲಿಯೂ ಬುದ್ದಿವಂತರಿದ್ದಾರೆ" ಗೇಲ್ ಬರೆದಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ನ್ಯೂಜಿಲೆಂಡ್‌ನಲ್ಲಿ ಪ್ರೇಕ್ಷಕ ನಿಂದಿಸಿದಾಗ ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿಯ ಬಗ್ಗೆ ಚರ್ಚೆಗಳಾಗಿತ್ತು. . ಈ ಘಟನೆಗೆ ನ್ಯೂಜಿಲೆಂಡ್‌ನ ಖ್ಯಾತ ಆಟಗಾರರು  ಮತ್ತು ಕ್ರಿಕೆಟ್ ಮಂಡಳಿ ಇಂಗ್ಲಿಷರಲ್ಲಿ ಕ್ಷಮೆ ಯಾಚಿಸಿತ್ತು. ಸೋಮವಾರ ರಾತ್ರಿ, ಇಂಗ್ಲೆಂಡ್ ಕ್ರಿಕೆಟ್ ತಂಡದ ಅಧಿಕೃತ ಟ್ವಿಟರ್ ಹ್ಯಾಂಡಲ್ ವರ್ಣಭೇದ ನೀತಿಯನ್ನು ಖಂಡಿಸಿ ಸಂದೇಶವನ್ನು ಪೋಸ್ಟ್ ಮಾಡಿದೆ. "ನಾವು ವೈವಿಧ್ಯತೆಯ ಪರವಾಗಿ ನಿಲ್ಲುತ್ತೇವೆ. ನಾವು ವರ್ಣಭೇದ ನೀತಿಯ ವಿರುದ್ಧ ನಿಲ್ಲುತ್ತೇವೆ" ಎಂದು ಸಂದೇಶವನ್ನು ಪ್ರಸಾರ ಮಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com