ಭಾರತ ಮಹಿಳಾ ಕ್ರಿಕೆಟ್ ನ ಹೊಸ ಸೆನ್ಸೇಷನ್, ಶಫಾಲಿ ವರ್ಮಾ ಈಗ ವಿಶ್ವದ ನಂ.1 ಟಿ20 ಆಟಗಾರ್ತಿ

ಭಾರತೀಯ ಮಹಿಳಾ ಕ್ರಿಕೆಟ್ ನ ಉದಯೋನ್ಮುಖ ಆಟಗಾರ್ತಿ ಮತ್ತು ಭಾರತದ ಬ್ಯಾಟಿಂಗ್ ಸೆನ್ಸೇಶನ್, 16 ವರ್ಷದ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ವಿಶ್ವ ಟಿ20 ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಭಾರತದ ಶಫಾಲಿ ವರ್ಮಾ
ಭಾರತದ ಶಫಾಲಿ ವರ್ಮಾ

ದುಬೈ: ಭಾರತೀಯ ಮಹಿಳಾ ಕ್ರಿಕೆಟ್ ನ ಉದಯೋನ್ಮುಖ ಆಟಗಾರ್ತಿ ಮತ್ತು ಭಾರತದ ಬ್ಯಾಟಿಂಗ್ ಸೆನ್ಸೇಶನ್, 16 ವರ್ಷದ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ವಿಶ್ವ ಟಿ20 ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಹೌದು.. ಮಹಿಳಾ ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಅತ್ತ ಐಸಿಸಿ ಮಹಿಳಾ ಟಿ20 ಆಟಗಾರ್ತಿಯರ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು ಬ್ಯಾಟಿಂಗ್ ಪಟ್ಟಿಯಲ್ಲಿ ಭಾರತದ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ಅಗ್ರ ಸ್ಥಾನಕ್ಕೇರಿದ್ದಾರೆ. ಟಿ20ಯಲ್ಲಿ ಶಫಾಲಿ ವರ್ಮಾ ಒಟ್ಟು 761 ಅಂಕಗಳನ್ನು ಹೊಂದಿದ್ದು, 750 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ನ ಸೂಜಿ ಬೇಟ್ಸ್ ರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಟಿ20ಯಲ್ಲಿ 
ಮಿಥಾಲಿ ರಾಜ್ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ ಶಫಾಲಿ ವರ್ಮಾ ಪಾತ್ರರಾಗಿದ್ದಾರೆ. 

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ 20ನೇ ಸ್ಥಾನದಲ್ಲಿದ್ದ ಶಫಾಲಿ ಒಂದೇ ಒಂದು ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಬರೋಬ್ಬರಿ 19 ಸ್ಥಾನ ಮೇಲೇರಿ ಅಗ್ರ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕೂಟದಲ್ಲಿ ಶಫಾಲಿ 40.25 ಸರಾಸರಿಯಲ್ಲಿ 161 ರನ್ ಗಳಸಿದ್ದಾರೆ. ಭರ್ಜರಿ ಬ್ಯಾಟ್ ಬೀಸುತ್ತಿರುವ ಶಫಾಲಿ 161.00 ಸ್ಟ್ರೇಕ್ ರೇಟ್ ಹೊಂದಿದ್ದಾರೆ.

ಐಸಿಸಿ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ ಅತೀ ಕಿರಿಯ ಕ್ರೀಡಾಪಟು ಎಂಬ ದಾಖಲೆಗೂ ಶಫಾಲಿ ವರ್ಮಾ ಪಾತ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com