ಇಂಗ್ಲೆಂಡ್ ಆಟಗಾರ್ತಿ ಅಂದು ಕ್ರೀಡಾಸ್ಫೂರ್ತಿ ಪ್ರದರ್ಶಿಸಿದ್ದು ಇಂದು ಭಾರತಕ್ಕೆ ವರವಾಯ್ತು, ವಿಡಿಯೋ!

ಟೀ ಇಂಡಿಯಾ ಮಹಿಳಾ ತಂಡ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಇಂಗ್ಲೆಂಡ್-ಟೀಂ ಇಂಡಿಯಾ
ಇಂಗ್ಲೆಂಡ್-ಟೀಂ ಇಂಡಿಯಾ

ಬೆಂಗಳೂರು: ಟೀ ಇಂಡಿಯಾ ಮಹಿಳಾ ತಂಡ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾಗಿದ್ದು ಟೂರ್ನಿಯಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಜಯ ಗಳಿಸಿದ ಭಾರತ ಫೈನಲ್ ಪ್ರವೇಶಕ್ಕೆ ಕಾರಣವಾಯಿತು. ಟೂರ್ನಿಯಲ್ಲಿ ಇಂಗ್ಲೆಂಡ್ 3 ಪಂದ್ಯಗಳಲ್ಲಿ ಜಯ ಗಳಿಸಿದೆ. 

ಇನ್ನು ಈ ಹಿಂದೆ ಇಂಗ್ಲೆಂಡ್ ಆಟಗಾರ್ತಿ ತೊರಿದ ಕ್ರೀಡಾಸ್ಫೂರ್ತಿ ಇಂದು ಭಾರತಕ್ಕೆ ವರವಾಗಿದೆ. ಸೋಲಿನ ಸುಳಿಯಲ್ಲಿದ್ದಾಗೂ ಎದುರಾಳಿ ತಂಡದ ಬ್ಯಾಟ್ಸ್ ಮನ್ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದರೂ ಇಂಗ್ಲೆಂಡ್ ಬೌಲರ್ ಕ್ಯಾಥರೀನ್ ಬ್ರಂಟ್ ಮಂಕಡ್ ರನೌಟ್ ಮಾಡದೇ ಕ್ರೀಡಾ ಸ್ಪೂರ್ತಿ ಮೆರೆದಿದ್ದರು.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ದಕ್ಷಿಣ ಆಫ್ರಿಕಾಗೆ ಗೆಲ್ಲಲು 4 ಎಸೆತಗಳಲ್ಲಿ 7 ರನ್ ಬೇಕಿತ್ತು. ಈ ವೇಳೆ ಇಂಗ್ಲೆಂಡ್ ಬೌಲರ್ ಕ್ಯಾಥರೀನ್ ಬ್ರಂಟ್ ಬೌಲಿಂಗ್ ಮಾಡುತ್ತಿದ್ದು ನಾನ್ ಸ್ಟ್ರೈಕ್ ನಲ್ಲಿದ್ದ ಆಫ್ರಿಕಾದ ಸುನೆ ಲೂಸ್ ಕ್ರೀಸ್ ಬಿಟ್ಟು ಮುಂದೆ ಬಂದಿದ್ದರು. ಈ ವೇಳೆ ಬ್ರಂಟ್ ಅವಕಾಶವಿದ್ದರೂ ರನೌಟ್ ಮಾಡಿರಲಿಲ್ಲ. ಆದರೆ ನಂತರದ ಎಸೆತದಲ್ಲಿ ಆಫ್ರಿಕಾ ಆಟಗಾರ್ತಿ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com