ಮೊದಲ ನೋಟದಲ್ಲೇ ಪ್ರೇಮಾಂಕುರವಾದ ಬಗ್ಗೆ ಇಶಾಂತ್‌ ಮಾತು

2011ರಲ್ಲಿ ದೆಹಲಿಯಲ್ಲಿ ಬ್ಯಾಸ್ಕೆಟ್‌ಬಾಲ್‌ ಟೂರ್ನಿಗೆ ಅತಿಥಿಯಾಗಿ ಹೋಗಿದ್ದ ಇಶಾಂತ್‌ ಶರ್ಮಾ, ಮೊಟ್ಟ ಮೊದಲ ಬಾರಿ  ಪ್ರತಿಮಾ ಅವರನ್ನು ನೋಡಿ ಇಷ್ಟಪಟ್ಟಿದ್ದರು. ಆ ಕ್ಷಣದಲ್ಲಿಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು. 
ಪತ್ನಿ ಪ್ರತಿಮಾ ಸಿಂಗ್ ಅವರೊಂದಿಗೆ ಇಶಾಂತ್ ಶರ್ಮಾ
ಪತ್ನಿ ಪ್ರತಿಮಾ ಸಿಂಗ್ ಅವರೊಂದಿಗೆ ಇಶಾಂತ್ ಶರ್ಮಾ

ನವದೆಹಲಿ:  ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ, ಹಾರ್ದಿಕ್‌ ಪಾಂಡ್ಯ-ನತಾಶ ಸ್ಟ್ಯಾನ್‌ಕೋವಿಚ್‌ ಅವರು ಪ್ರೇಮ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ. ಆದರೆ, ಟೀಮ್‌ ಇಂಡಿಯಾ ಹಿರಿಯ ವೇಗಿ ಇಶಾಂತ್‌ ಶರ್ಮಾ ಅವರದೂ ಕೂಡ ಲವ್‌ ಮ್ಯಾರೇಜ್‌ ಎಂದು ಇನ್ನೂ ಸಾಕಷ್ಟು ಮಂದಿಗೆ ತಿಳಿದೇ ಇಲ್ಲ. 

ವೇಗಿ ಇಶಾಂತ್‌ ಶರ್ಮಾ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಪ್ರತಿಮಾ ಎಂಬುವವರನ್ನು 2016ರಲ್ಲಿ ವಿವಾಹವಾಗಿದ್ದರು. 2011ರಲ್ಲಿ ದೆಹಲಿಯಲ್ಲಿ ಬ್ಯಾಸ್ಕೆಟ್‌ಬಾಲ್‌ ಟೂರ್ನಿಗೆ ಅತಿಥಿಯಾಗಿ ಹೋಗಿದ್ದ ಇಶಾಂತ್‌ ಶರ್ಮಾ, ಮೊಟ್ಟ ಮೊದಲ ಬಾರಿ  ಪ್ರತಿಮಾ ಅವರನ್ನು ನೋಡಿ ಇಷ್ಟಪಟ್ಟಿದ್ದರು. ಆ ಕ್ಷಣದಲ್ಲಿಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು. 

ನನ್ನ ಸ್ನೇಹಿತ ಆಯೋಜನೆ ಮಾಡಿದ್ದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಗೆ ಮುಖ್ಯ ಅತಿಥಿಯಾಗಿ ನಾನು ಭಾಗವಹಿಸಿದ್ದೆ. ನನ್ನ ಜೀವನದಲ್ಲಿ ಮೊದಲ ಬಾರಿ ಲವ್ ಅಟ್‌ ಫಸ್ಟ್‌ ಸೈಟ್‌ ಆಯ್ತು. ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಪ್ರತಿಮಾ ಅವರನ್ನು ಮೊದಲ ಬಾರಿ ನೋಡಿದಾಗಲೇ ಮದುವೆಯಾದರೇ ಈಕೆಯನ್ನೇ ಆಗಬೇಕು ಎಂದು ಆ ಕ್ಷಣವೇ ನಿರ್ಧಾರ ಮಾಡಿದೆ,'' ಎಂದು ಇಶಾಂತ್‌ ಶರ್ಮಾ ಕ್ರಿಕ್‌ಬಜ್‌ ಹೊಸ ಕಾರ್ಯಕ್ರಮ ಸ್ಪೈಸಿ ಪಿಚ್‌ನಲ್ಲಿ ತಮ್ಮ ಪ್ರೇಮ ಕಥೆಯನ್ನು ಹೇಳಿಕೊಂಡರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com