ಭಾರತದಲ್ಲಿ ನನಗಿಂತ ಉತ್ತಮ ಪ್ರತಿಭೆಗಳಿದ್ದಾರೆ: ಮಾರ್ಕಸ್‌ ಸ್ಟೋಯಿನಿಸ್‌

ತಂಡದಲ್ಲಿ ಆಡದೇ ಇದ್ದರೂ ಭಾರತೀಯ ಕ್ರಿಕೆಟಿಗರು ನನಗಿಂತ ಹೆಚ್ಚಿನ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋನಿಯಸ್‌ ಹೇಳಿದ್ದಾರೆ.
ಭಾರತದಲ್ಲಿ ನನಗಿಂತ ಉತ್ತಮ ಪ್ರತಿಭೆಗಳಿದ್ದಾರೆ: ಮಾರ್ಕಸ್‌ ಸ್ಟೋಯಿನಿಸ್‌
ಭಾರತದಲ್ಲಿ ನನಗಿಂತ ಉತ್ತಮ ಪ್ರತಿಭೆಗಳಿದ್ದಾರೆ: ಮಾರ್ಕಸ್‌ ಸ್ಟೋಯಿನಿಸ್‌

ನವದೆಹಲಿ: ತಂಡದಲ್ಲಿ ಆಡದೇ ಇದ್ದರೂ ಭಾರತೀಯ ಕ್ರಿಕೆಟಿಗರು ನನಗಿಂತ ಹೆಚ್ಚಿನ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋನಿಯಸ್‌ ಹೇಳಿದ್ದಾರೆ.

ವಿಶ್ವದಲ್ಲೇ ಪ್ರತಿಭಾವಂತರನ್ನು ಒಳಗೊಂಡಿರುವ ತಂಡ ಭಾರತ. ನನಗಿಂತಲೂ ಹೆಚ್ಚಿನ ಪ್ರತಿಭೆ ಹೊಂದಿರುವ ಆಟಗಾರರು ಅವರ ಪ್ರತಿಭೆಗೆ ತಕ್ಕಂತೆ ಆಡುತ್ತಿಲ್ಲ.,'' ಎಂದು ಆಸ್ಟ್ರೇಲಿಯಾ ತಂಡಕ್ಕೆ ಸಂಬಧಿಸಿದ 'ದಿ ಟೆಸ್ಟ್‌' ಡಾಕ್ಯುಮೆಂಟರಿಯಲ್ಲಿ ತಿಳಿಸಿದ್ದಾರೆ.

ಕಳೆದ 2018ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ 2-1 ಅಂತರದಲ್ಲಿ ಟೆಸ್ಟ್‌ ಸರಣಿ, 2-1 ಅಂತರದಲ್ಲಿ ಏಕದಿನ ಸರಣಿ ಹಾಗೂ ಟಿ20 ಸರಣಿಯಲ್ಲಿ 1-1 ಡ್ರಾ ಮಾಡಿಕೊಂಡಿತ್ತು. ನಂತರ, ಭಾರತಕ್ಕೆ ಆಗಮಿಸಿದ್ದ ಆಸ್ಟ್ರೇಲಿಯಾ ತಂಡ, ಏಕದಿನ ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿತ್ತು. ಬಳಿಕ, ಪುಟಿದೆದ್ದ ಆರೋನ್ ಫಿಂಚ್ ಬಳಗ 3-2 ಅಂತರದಲ್ಲಿ ಕೊಹ್ಲಿ ಪಡೆಯನ್ನು ಮಣಿಸಿತ್ತು.

"ಭಾರತ ನೆಲದಲ್ಲಿ ಆಡಲು ಇಷ್ಟ ಪಡುತ್ತೇನೆ. ಹೋಲಿಕೆಯಾಗದ ಶಕ್ತಿ ಹಾಗೂ ಭಾರತದ ಸಂಸ್ಕೃತಿ ನನಗಿಷ್ಟ. ನಾವು ಅಲ್ಲಿ ಹೇಗೆ ಇರುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ.,'' ಎಂದು ಸ್ಟೋಯಿನಿಸ್‌ ತಿಳಿಸಿದ್ದಾರೆ. 30ರ ಪ್ರಾಯದ ಆಟಗಾರ ಮಾರ್ಷ್‌ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯಲ್ಲಿ ಕೊನೆಯ ಪಂದ್ಯವಾಡಿದ್ದರು. ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಿದ್ದರು. 2020ರ ಆವೃತ್ತಿಯಲ್ಲಿ ಬಿಬಿಎಲ್‌ ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿದ್ದಾರೆ. ಇವರು ಒಟ್ಟು 705 ರನ್ ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com