ಮನೆಯಲ್ಲಿಯೇ ಇರುವಂತೆ ನಾಗರಿಕರಿಗೆ 'ವಿರೂಷ್ಕಾ' ದಂಪತಿ ಕೋರಿಕೆ

ಸೆಲೆಬ್ರಿಟಿ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದೇಶದಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್ -19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಮನೆಯೊಳಗೆ ಇರುವಂತೆ ಹಾಗೂ ಅಧಿಕಾರಿಗಳು ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಮನೆಯಲ್ಲಿಯೇ ಇರುವಂತೆ ನಾಗರಿಕರಿಗೆ 'ವಿರೂಷ್ಕಾ' ದಂಪತಿ ಕೋರಿಕೆ

ನವದೆಹಲಿ: ಸೆಲೆಬ್ರಿಟಿ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದೇಶದಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್ -19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಮನೆಯೊಳಗೆ ಇರುವಂತೆ ಹಾಗೂ ಅಧಿಕಾರಿಗಳು ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.


ಬಾಲಿವುಡ್ ನಟಿ ಅನುಷ್ಕಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ "ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ. ಆರೋಗ್ಯವಾಗಿರಿ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ.


ತಮ್ಮ ಪತ್ನಿಯ ಸಂದೇಶವನ್ನು ಮರು-ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, "ಸರ್ಕಾರದ ನಿರ್ದೇಶನವನ್ನು ಸಂಪೂರ್ಣವಾಗಿ ಗೌರವಿಸುವುದು ಮತ್ತು ಅನುಸರಿಸುವುದು ಈ ಸಮಯದ ಅವಶ್ಯಕತೆಯಾಗಿದೆ. ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ" ಎಂದು ಬರೆದಿದ್ದಾರೆ.


"ನಾವೆಲ್ಲರೂ ಬಹಳ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ನಮಗೆ ತಿಳಿದಿದೆ ಮತ್ತು ಈ ಕೊರೊನಾ ವೈರಸ್ ಅನ್ನು ತಡೆಯುವ ಏಕೈಕ ಮಾರ್ಗವೆಂದರೆ ಒಗ್ಗಟ್ಟಿನೊಂದಿಗೆ ವರ್ತಿಸುವುದು" ಎಂದು ದಂಪತಿ ವೀಡಿಯೊದಲ್ಲಿ ಹೇಳಿದೆ.


"ನಮ್ಮ ಸುರಕ್ಷತೆಗಾಗಿ ಮತ್ತು ಎಲ್ಲರಿಗಾಗಿ ನಾವು ನಮ್ಮ ಮನೆಯಲ್ಲಿಯೇ ಇರುತ್ತೇವೆ ಮತ್ತು ವೈರಸ್ ಹರಡುವುದನ್ನು ತಡೆಗಟ್ಟಲು ನೀವು ಇದನ್ನು ಮಾಡಬೇಕು. ಸ್ವಯಂ ಪ್ರತ್ಯೇಕತೆಯಿಂದ ನಮಗೆ ಮತ್ತು ಎಲ್ಲರಿಗೂ ಸುರಕ್ಷಿತವಾಗುವಂತೆ ಮಾಡೋಣ" ಎಂದು ಅವರು ಹೇಳಿದ್ದಾರೆ.


ಇದಕ್ಕೂ ಮುನ್ನ ಗುರುವಾರ, ಕೊಹ್ಲಿ ಎಲ್ಲ ನಾಗರಿಕರು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕೆಂದು ಒತ್ತಾಯಿಸಿದ್ದರು. " ಕೊರೊನಾ ವೈರಸ್ ಸಾಂಕ್ರಮಿಕವಾಗಿರುವ ಹಿನ್ನೆಲೆಯಲ್ಲಿ ನಾವು ಜಾಗರೂಕರಾಗಿರಬೇಕು," ಎಂದು ಹೇಳಿದ್ದರು.


ಕೊರೊನಾ ವೈರಸ್ ನಿಂದ ಉಂಟಾಗುವ ಆತಂಕವನ್ನು ಎದುರಿಸಲು ಜಾಗರೂಕರಾಗಿರಿ, ಗಮನವಿರಲಿ ಮತ್ತು ಜಾಗೃತರಾಗಿರಿ. ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ಘೋಷಿಸಿದಂತೆ ಕೊರೊನಾದ ವಿರುದ್ಧ ಹೋರಾಡುವ ಜವಾಬ್ದಾರಿಯುತ ನಾಗರಿಕರಾದ ನಾವು ನಮ್ಮ ಸುರಕ್ಷತೆಗಾಗಿ ಹಾಕಿರುವ ಮಾನದಂಡಗಳನ್ನು ಪಾಲಿಸಬೇಕಾಗಿದೆ" ಎಂದು ಕೊಹ್ಲಿ ಟ್ವೀಟ್ ನಲ್ಲಿ ಹೇಳಿದ್ದಾರೆ.


ಕೊರೊನಾ ವೈರಸ್ ವಿರುದ್ಧ ಹೋರಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ 31 ವರ್ಷದ ಕೊಹ್ಲಿ, ದೇಶ ಮತ್ತು ಜಗತ್ತಿನ ವೈದ್ಯಕೀಯ ವೃತ್ತಿಪರರನ್ನು ಇದೇ ವೇಳೆ ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com