ಕಾಶ್ಮೀರ ಕುರಿತ ಹೇಳಿಕೆ: ಶಾಹಿದ್ ಅಫ್ರಿದಿಗೆ ತಿರುಗೇಟು ಕೊಟ್ಟ ಗಂಭೀರ್!

ಇತ್ತೀಚಿಗೆ ಕಾಶ್ಮೀರ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆಗೆ  ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ಇತ್ತೀಚಿಗೆ ಕಾಶ್ಮೀರ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆಗೆ  ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನಕ್ಕೆ 7 ಲಕ್ಷ ಸೈನಿಕರಿದ್ದು, 20 ಕೋಟಿ ಜನರ ಬೆಂಬಲವಿದೆ ಎಂದು 16 ವರ್ಷದ ಶಾಹೀದ್ ಅಫ್ರಿದಿ ಹೇಳುತ್ತಾರೆ. 70 ವರ್ಷದಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡಲಾಗುತ್ತಿದೆ.ಅಫ್ರಿದಿ, ಇರ್ಮಾನ್, ಮತ್ತು ಬಾಜ್ವದಂತಹ ಜೋಕರ್ ಗಳು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಷವನ್ನು ಹೊರ ಹಾಕುವ ಮೂಲಕ ಪಾಕಿಸ್ತಾನ ಜನರನ್ನು ಮರುಳಾಗಿಸಬಹುದು ಆದರೆ, ಜಡ್ಜ್ ಮೆಂಟ್ ದಿನದವರೆಗೂ ಕಾಶ್ಮೀರ ಪಡೆಯಲು ಆಗದು, ಬಾಂಗ್ಲಾದೇಶವನ್ನು ನೆನಪಿಸಿಕೊಳಿ ಎಂದು ಗಂಭೀರ್ ಇಂದು ಟ್ವೀಟ್ ಮಾಡಿದ್ದಾರೆ.

ಕಾಶ್ಮೀರಿಗಳ ಸಂಕಟವನ್ನು ಧಾರ್ಮಿಕ ನಂಬಿಕೆಗಳಿಂದ ನಿವಾರಿಸಲು ಸಾಧ್ಯವಿಲ್ಲ, ಸೂಕ್ತ ಸ್ಥಳದಲ್ಲಿ ಸೂಕ್ತ ಹೃದಯವಂತರಿಂದ ಮಾತ್ರ ಸಾಧ್ಯ, ಕಾಶ್ಮೀರ ರಕ್ಷಿಸಿ ಎಂಬರ್ಥದಲ್ಲಿ ಶಾಹೀದ್ ಅಫ್ರಿದಿ ಶುಕ್ರವಾರ ಟ್ವೀಟ್ ಮಾಡಿದ್ದರು. 

ಈ ಇಬ್ಬರು ಆಟಗಾರರ ನಡುವೆ ರಾಜಕೀಯದಿಂದ ಹಿಡಿದು ವೃತ್ತಿಜೀವನದವರೆಗೂ ಧೀರ್ಘಕಾಲದಿಂದ ಮಾತಿನ ಸಮರ ನಡೆಯುತ್ತಲೇ ಇದೆ. 

ಗಂಭೀರ್ ಯಾವುದೇ ದೊಡ್ಡ ದಾಖಲೆಗಳನ್ನು ಮಾಡಿಲ್ಲ, ಆದರೂ ಡಾನ್ ಬ್ರಾಡ್ಮನ್  ಮತ್ತು ಜೇಮ್ಸ್  ಬಾಂಡ್ ನಡುವಿನರಂತೆ  ವರ್ತಿಸುತ್ತಾರೆ ಎಂದು ಪುಸ್ತಕವೊಂದರಲ್ಲಿ ಅಫ್ರಿದಿ ಟೀಕಿಸಿದ್ದರು. 

ತಮ್ಮ ವಯಸ್ಸಿನ ಬಗ್ಗೆ ನೆನಪಿಟ್ಟುಕೊಳ್ಳದವರು ನನ್ನ ದಾಖಲೆಯನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ ಎಂದು ಗಂಭೀರ್ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com