ಐಪಿಎಲ್ ಎಲಿಮಿನೇಟರ್: ಸನ್‌ರೈಸರ್ಸ್ ಹೈದರಾಬಾದ್‌ ಗೆ ಆವೇಗದ ಹುಚ್ಚು, ಆದರೆ ಆರ್ ಸಿಬಿ ಬಳಿ ಇದೆ ಕಿಚ್ಚು!

ಐಪಿಎಲ್ ಪಂದ್ಯದ ಎನಿಮಿನೇಷನ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಳೆ(ಶುಕ್ರವಾರ) ಸನ್‌ರೈಸರ್ಸ್ ಹೈದರಾಬಾದ್(ಎಸ್ ಆರ್ ಎಚ್)  ತಂಡ ಎದುರಿಸುತ್ತಿದ್ದು, ಆರ್ ಸಿಬಿಯನ್ನು ಮಣಿಸಿ ತನ್ನ ಗೆಲುವನ್ನು ಮುಂದುವರಿಸಲು ತಂಡ ಸಜ್ಜಾಗಿದೆ. 
ಆರ್ ಸಿಬಿ ತಂಡ
ಆರ್ ಸಿಬಿ ತಂಡ

ಅಬು ದಾಬಿ: ಐಪಿಎಲ್ ಪಂದ್ಯದ ಎನಿಮಿನೇಷನ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಳೆ(ಶುಕ್ರವಾರ) ಸನ್‌ರೈಸರ್ಸ್ ಹೈದರಾಬಾದ್(ಎಸ್ ಆರ್ ಎಚ್)  ತಂಡ ಎದುರಿಸುತ್ತಿದ್ದು, ಆರ್ ಸಿಬಿಯನ್ನು ಮಣಿಸಿ ತನ್ನ ಗೆಲುವನ್ನು ಮುಂದುವರಿಸಲು ತಂಡ ಸಜ್ಜಾಗಿದೆ. 

ಟೂರ್ನಮೆಂಟ್ ಆರಂಭದಲ್ಲಿ ನಿಧಾನಗತಿಯಲ್ಲಿ ಟೇಕ್ ಆಫ್ ಪಡೆದುಕೊಂಡ ಸನ್ ರೈಸರ್ಸ್ ಹೈದರಾಬಾದ್, ನಂತರ ಎರಡನೇ ಹಂತದಲ್ಲಿ ಧೈರ್ಯದಿಂದ ಮುನ್ನುಗ್ಗಿ, ಪ್ಲೇ ಆಫ್ ಹಂತಕ್ಕೆ ಸರಿಯಾದ ಸಮಯದಲ್ಲಿ ಅರ್ಹತೆ ಪಡೆದುಕೊಂಡು ಸದ್ಯ ಲೀಗ್ ಹಂತದಲ್ಲಿ ಆರ್ ಸಿಬಿಯಿಂದ ಮೊದಲು ಮೂರನೇ ಸ್ಥಾನದಲ್ಲಿದೆ. 

ಕಳೆದ ಪಂದ್ಯಾವಳಿಯ ಕೊನೆಯಲ್ಲಿ ಎರಡೂ ತಂಡಗಳಿಗೆ ಇದು ವ್ಯತಿರಿಕ್ತ ಫಲಿತಾಂಶವಾಗಿದೆ. ಸತತ ನಾಲ್ಕು ಬಾರಿ ಸೋಲು ಕಂಡ ಆರ್ ಸಿಬಿ ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನಕ್ಕಿಳಿದಿದ್ದು, ಎಸ್ ಆರ್ ಎಚ್ ಹ್ಯಾಟ್ರಿಕ್ ಗೆಲುವು ಕಂಡು ಮೂರನೇ ಸ್ಥಾನಕ್ಕೆ ಜಿಗಿದಿದೆ.

ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಎಸ್ಆರ್ ಎಚ್ ತಂಡ ಇತ್ತೀಚಿನ ಮೂರೂ ಪಂದ್ಯಗಳನ್ನು ಅದ್ಬುತವಾಗಿ ಆಡಿತ್ತು. ನಾಳೆ ಕೂಡ ಅದೇ ಉತ್ಸಾಹ ಮತ್ತು ಆತ್ಮವಿಶ್ವಾಸದೊಂದಿಗೆ ತಂಡ ಆರ್ ಸಿಬಿಯನ್ನು ಎದುರಿಸುತ್ತಿದೆ.

ಕಳೆದ ಕೆಲ ಪಂದ್ಯಗಳಲ್ಲಿ ಎಸ್ಆರ್ ಎಚ್  ತಂಡದ ಗೆಲುವು ನಾಯಕ ವಾರ್ನರ್ ಮತ್ತು ವೃದ್ದಿಮನ್ ಸಾಹ ಅವರನ್ನು ಅವಲಂಬಿಸಿತ್ತು. ಇವರಿಬ್ಬರು ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 107 ಹಾಗೂ 151 ರನ್ ಗಳಿಸಿದ್ದು ತಂಡಕ್ಕೆ ಧನಾತ್ಮಕ ಅಂಶವಾಯಿತು. ಆಡಿರುವ 14 ಪಂದ್ಯಗಳಲ್ಲಿ ವಾರ್ನರ್ 529 ರನ್ ಗಳಿಸಿ ಸ್ಕೋರಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. ಸಾಹ 3 ಪಂದ್ಯಗಳಲ್ಲಿ 184 ರನ್ ಗಳಿಸಿ ಈ ಹಿಂದಿನ 11 ಪಂದ್ಯಗಳಲ್ಲಿ ಸರಿಯಾಗಿ ಬಳಸಿಕೊಳ್ಳದೆ ತಂಡ ತಪ್ಪು ಮಾಡಿತು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಬೌಲಿಂಗ್ ವಿಚಾರಕ್ಕೆ ಬಂದಾಗ ಸಂದೀಪ್ ಶರ್ಮ, ಜೇಸನ್ ಹೋಲ್ಡರ್, ಶಹಬಾಜ್ ನದೀಮ್, ಟಿ ನಟರಾಜನ್ ಮತ್ತು ರಶೀದ್ ಖಾನ್ ಮೇಲೆ ತಂಡ ನಿರೀಕ್ಷೆ ಇಟ್ಟುಕೊಂಡಿದೆ. 

ಸತತ ನಾಲ್ಕು ಬಾರಿ ಸೋತಿರುವ ಆರ್ ಸಿಬಿಗೆ ನಾಳೆ ಮತ್ತೆ ಹಿಂದಿನ ಗೆಲುವಿನ ಹಳಿಗೆ ಮರಳುವ ವಿಶ್ವಾಸವಿದೆ. ಹಿಂದಿನ ಸೋಲನ್ನು ಮರೆತು ಚೆನ್ನಾಗಿ ಪ್ರದರ್ಶನ ನೀಡಿ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕೆಂದು ನಾಯಕ ವಿರಾಟ್ ಕೊಹ್ಲಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಸನ್ ರೈಸರ್ಸ್ ತಂಡವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ.

ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಹೆಚ್ಚಿನ ಜವಾಬ್ದಾರಿ ಹೊತ್ತು ತಂಡವನ್ನು ಮುನ್ನಡೆಸುವ ಅಗತ್ಯವಿದೆ. 

ಸನ್ ರೈಸರ್ಸ್ ತಂಡ: ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್ (ಕ್ಯಾ), ಜಾನಿ ಬೈರ್‌ಸ್ಟೋವ್ (ವಿಕೆ), ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಹಾ (ವಿ.ಕೀ), ವಿರಾಟ್ ಸಿಂಗ್, ಭುವನೇಶ್ವರ್ ಕುಮಾರ್, ಬೆಸಿಲ್ ಥಾಂಪಿ, ಅಭಿಷೇಕ್ ಶರ್ಮಾ, ಬಿಲ್ಲಿ ಸ್ಟ್ಯಾನ್‌ಲೇಕ್, ಸಂದೀಪ್ ಶಮದ್ , ಶ್ರೀವಾಟ್ಸ್ ಗೋಸ್ವಾಮಿ, ಸಿದ್ದಾರ್ಥ್ ಕೌಲ್, ಕೆ ಖಲೀಲ್ ಅಹ್ಮದ್, ಟಿ ನಟರಾಜನ್, ಮಿಚೆಲ್ ಮಾರ್ಷ್, ಬವನಕಾ ಸಂದೀಪ್, ಫ್ಯಾಬಿಯನ್ ಅಲೆನ್, ಅಬ್ದುಲ್ ಸಮದ್, ಸಂಜಯ್ ಯಾದವ್, ರಶೀದ್ ಖಾನ್ ಇದ್ದಾರೆ. 

ಇನ್ನು ಆರ್ ಸಿಬಿ ತಂಡದಲ್ಲಿ, ವಿರಾಟ್ ಕೊಹ್ಲಿ (ಕ್ಯಾ), ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್ (ವಿ.ಕೀ), ಆರನ್ ಫಿಂಚ್, ಜೋಶ್ ಫಿಲಿಪ್, ಕ್ರಿಸ್ ಮೋರಿಸ್, ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್, ದೇವದತ್ ಪಡಿಕ್ಕಲ್, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಡೇಲ್ ಸ್ಟೇನ್, ಪವನ್ ನೇಗಿ ಉದಾನಾ, ಶಿವಂ ದುಬೆ, ಉಮೇಶ್ ಯಾದವ್, ಗುರ್ಕೀರತ್ ಸಿಂಗ್ ಮನ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಆಡಮ್ ಜಂಪಾ ಇದ್ದಾರೆ.

ಭಾರತೀಯ ಕಾಲಮಾನ ನಾಳೆ ಸಾಯಂಕಾಲ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com