ದೇವದತ್ ಪಡಿಕ್ಕಲ್ ಭಾರತ ತಂಡದ ಮುಂದಿನ ಸ್ಟಾರ್ ಬ್ಯಾಟ್ಸ್ ಮನ್: ಜಿ.ಕೆ. ಅನಿಲ್ ಕುಮಾರ್

 ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರನ್ನು ಕರ್ನಾಟಕ ತರಬೇತುದಾರ ಜಿ.ಕೆ ಅನಿಲ್‌ ಕುಮಾರ್‌ ಶ್ಲಾಘಿಸಿದ್ದಾರೆ. 

Published: 09th November 2020 05:01 PM  |   Last Updated: 09th November 2020 06:19 PM   |  A+A-


Devadutt1

ದೇವದತ್ ಪಡಿಕ್ಕಲ್

Posted By : Nagaraja AB
Source : UNI

ನವದೆಹಲಿ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರನ್ನು ಕರ್ನಾಟಕ ತರಬೇತುದಾರ ಜಿ.ಕೆ. ಅನಿಲ್‌ ಕುಮಾರ್‌ ಶ್ಲಾಘಿಸಿದ್ದಾರೆ. 

ದೇವದತ್‌ ಪಡಿಕ್ಕಲ್‌ ಸೇರಿದಂತೆ ಕೆ.ಎಲ್‌ ರಾಹುಲ್‌, ಮಯಾಂಕ್‌ ಅಗರ್ವಾಲ್‌ ಕರುಣ್‌ ನಾಯರ್‌ ಸೇರಿದಂತೆ ಅನೇಕ ಆಟಗಾರರು ಅನಿಲ್‌ ಕುಮಾರ್‌ ಅವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದಾರೆ. ಪದಾರ್ಪಣೆ ಮಾಡಿದ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿಯೇ ದೇವದತ್‌ ಪಡಿಕ್ಕಲ್‌ ಅದ್ಭುತ ಬ್ಯಾಟಿಂಗ್‌ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. 

ದೇವದತ್  ಆಡಿದ 14 ಪಂದ್ಯಗಳಿಂದ 31.52ರ ಸರಾಸರಿಯಲ್ಲಿ 473 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ, ಪಡಿಕ್ಕಲ್‌ ಆರ್‌ಸಿಬಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ ಮಾಡಿದ ಬ್ಯಾಟ್ಸ್‌ಮನ್‌ ಆಗಿ ನಾಯಕ ಕೊಹ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕರ್ನಾಟಕ 19  ವಯೋಮಿತಿ ಕೋಚ್‌ ಅನಿಲ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ ಅಥವಾ ಜಸ್ಪ್ರಿತ್‌ ಬುಮ್ರಾ ಅವರು ತಮ್ಮ ಮೊದಲ ಆವೃತ್ತಿಯ ಐಪಿಎಲ್‌ ನಲ್ಲಿ ದೇವದತ್‌ ಪಡಿಕ್ಕಲ್‌ ರೀತಿ ಮಿಂಚಿರಲಿಲ್ಲ. ಆದರೆ, ಕರ್ನಾಟಕದ ಆಟಗಾರ ಎಲ್ಲರ ಗಮನ ಸೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

ದೇವದತ್  ಶೀಘ್ರದಲ್ಲೇ ಭಾರತ ತಂಡದಲ್ಲಿ ಬುಮ್ರಾ ಮತ್ತು ಪಾಂಡ್ಯ ತಲುಪಿದ ಎತ್ತರವನ್ನು ತಲುಪಲಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯು ಅದಕ್ಕೆ ಒಂದು ಆರಂಭ. ಪಡಿಕ್ಕಲ್ ನಿರ್ಣಾಯಕ ಕ್ಷಣಗಳಲ್ಲಿ ಆಡಲು ಇಷ್ಟಪಡುತ್ತಾರೆ. ಇದು ಅವರ ನೆಚ್ಚಿನ ವಿಷಯಗಳಲ್ಲಿ ಒಂದಾಗಿದೆ. ಅಂತಹ ಬ್ಯಾಟ್ಸ್‌ಮನ್‌ಗಳನ್ನು ನೋಡುವುದು ಬಹಳ ಅಪರೂಪ ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp