7 ವರ್ಷಗಳ ಹಿಂದೆ ಬ್ರಿಯಾನ್ ಲಾರಾ ನೀಡಿದ್ದ ಉಡುಗೊರೆಯನ್ನು ಸ್ಮರಿಸಿದ ಸಚಿನ್ ತೆಂಡೂಲ್ಕರ್

ತಾವು ನಿವೃತ್ತಿಯಾದಾಗ ತಮ್ಮ ಸ್ನೇಹಿತ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನೀಡಿದ್ದ ಉಡುಗೊರೆಯನ್ನು ಸಚಿನ್ ಸ್ಮರಿಸಿದ್ದಾರೆ. 
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ನಿವೃತ್ತಿಗೊಂಡು ನ.16 ಕ್ಕೆ ಬರೊಬ್ಬರಿ 7 ವರ್ಷಗಳು! ತಾವು ನಿವೃತ್ತಿಯಾದಾಗ ತಮ್ಮ ಸ್ನೇಹಿತ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನೀಡಿದ್ದ ಉಡುಗೊರೆಯನ್ನು ಸಚಿನ್ ಸ್ಮರಿಸಿದ್ದಾರೆ. 

ಟ್ವಿಟರ್ ನಲ್ಲಿ ತಮ್ಮ ನೆನಪುಗಳನ್ನು ಸ್ಮರಿಸಿರುವ ಸಚಿನ್ ತೆಂಡೂಲ್ಕರ್ ಬ್ರಿಯಾನ್ ಲಾರಾ ನನಗೆ ವಿಶೇಷ ಉಡುಗೊರೆ ನೀಡಿದ್ದರು ಎಂದು ಹೇಳಿದ್ದಾರೆ.

" ಈ ದಿನ 7 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ಕ್ರಿಕೆಟ್ ಹಾಗೂ ನನ್ನ ಸ್ನೇಹಿತ ಬ್ರಿಯಾನ್ ಲಾರ ಹಾಗೂ ಹೆನ್ರಿ ಗೇಲ್ ಈ ಸುಂದರವಾದ ಸ್ಟೀಲ್ ಡ್ರಮ್ ನ್ನು ಉಡುಗೊರೆಯಾಗಿ ನೀಡಿದ್ದರು, ಈ ಅದ್ಭುತವಾದ ಉಡುಗೊರೆಗೆ ನಾನು ಎಂದಿಗೂ ಕೃತಜ್ಞನಾ­ಗಿರುತ್ತೇನೆ ಎಂದು ಸಚಿನ್ ಬರೆದಿದ್ದಾರೆ. 

ತಮ್ಮ ಆಪ್ತ ಸ್ನೇಹಿತರೂ ಆಗಿರುವ ಬ್ರಿಯಾನ್ ಲಾರಾ ತಮ್ಮ ಮನೆಗೆ ಭೇಟಿ ನೀಡಿ ಈ ಡ್ರಮ್ ನ್ನು ನುಡಿಸಿದ್ದರು ಎಂಬ ಮಾಹಿತಿಯನ್ನೂ ಸಚಿನ್ ಬಹಿರಂಗಪಡಿಸಿದ್ದಾರೆ. "ಬ್ರಿಯಾನ್ ಲಾರಾ ನಮ್ಮ ಮನೆಗೆ ಬಂದು ಈ ಡ್ರಮ್ ನ್ನು ನುಡಿಸಿದ್ದರು, ನಾನೂ ಕೂಡ ನುಡಿಸಬಲ್ಲೆನೇ ನೋಡೋಣ ಎಂದು ಸಚಿನ್ ಡ್ರಮ್ ನುಡಿಸಲು ಯತ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com