ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದ ಕೇನ್ ರಿಚರ್ಡ್‌ಸನ್ 

ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್‌ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ.
ಕೇನ್ ರಿಚರ್ಡ್‌ಸನ್
ಕೇನ್ ರಿಚರ್ಡ್‌ಸನ್

ಸಿಡ್ನಿ: ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್‌ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ.

ರಿಚರ್ಡ್‌ಸನ್ ಅಡಿಲೇಡ್ ನಲ್ಲಿ ತನ್ನ ಪತ್ನಿ ಹಾಗೂ ನವಜಾತ ಮಗುವಿನೊಂದಿಗೆ ಕಾಲ ಕಳೆಯುವ ಸಲುವಾಗಿ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಹೇಳಿದೆ.

"ಕೇನ್ ನಿರ್ಧಾರ ತಂಡಕ್ಕೆ ಕಠಿಣವಾಗಿದೆ ಆದರೆ ಅವರ ನಿರ್ಧಾರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ." ಎಂದು ನ್ಯಾಷನಲ್ ಸೆಲೆಕ್ಟರ್ ಟ್ರೆವರ್ ಹೊನ್ಸ್ ಹೇಳಿದ್ದಾರೆ.

ಇನ್ನು ರಿಚರ್ಡ್‌ಸನ್  ಬದಲಿ ಆಟಗಾರ 33 ವರ್ಷದ ಟೈ 7 ಏಕದಿನ ಮತ್ತು 26 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಆಸ್ಟ್ರೇಲಿಯಾದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಕಪ್ ಪೇಸ್‌ಮ್ಯಾನ್ ಆಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com