ನಾಲ್ಕೂವರೆ ತಿಂಗಳುಗಳಲ್ಲಿ 22 ಬಾರಿ ಕೋವಿಡ್ ಪರೀಕ್ಷೆಗೊಳಗಾಗಿದ್ದೇನೆ: ಸೌರವ್ ಗಂಗೂಲಿ

 ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ನಾಲ್ಕೂವರೆ ತಿಂಗಳುಗಳಲ್ಲಿ 22 ಬಾರಿ ಕೋವಿಡ್-19 ಪರೀಕ್ಷೆಗೊಳಗಾಗಿರುವುದಾಗಿ ತಿಳಿಸಿದ್ದಾರೆ.

Published: 24th November 2020 11:15 PM  |   Last Updated: 24th November 2020 11:15 PM   |  A+A-


Have undergone 22 COVID tests in the past four and half months: Sourav Ganguly

ನಾಲ್ಕೂವರೆ ತಿಂಗಳುಗಳಲ್ಲಿ 22 ಬಾರಿ ಕೋವಿಡ್ ಪರೀಕ್ಷೆಗೊಳಗಾಗಿದ್ದೇನೆ: ಸೌರವ್ ಗಂಗೂಲಿ

Posted By : Srinivas Rao BV
Source : The New Indian Express

ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ನಾಲ್ಕೂವರೆ ತಿಂಗಳುಗಳಲ್ಲಿ 22 ಬಾರಿ ಕೋವಿಡ್-19 ಪರೀಕ್ಷೆಗೊಳಗಾಗಿರುವುದಾಗಿ ತಿಳಿಸಿದ್ದಾರೆ.

ಪ್ಯಾಂಡೆಮಿಕ್ ನಡುವೆಯೂ ವೃತ್ತಿಜೀವನದ ಜವಾಬ್ದಾರಿಗಳನ್ನು ನಿಭಾಯಿಸಲು ಯತ್ನಿಸುತ್ತಿರುವುದಾಗಿ ಸೌರವ್ ಗಂಗೂಲಿ ಹೇಳಿದ್ದಾರೆ. ಐಪಿಎಲ್ ಹಿನ್ನೆಲೆಯಲ್ಲಿ ಗಂಗೂಲಿ ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಪ್ರಾರಂಭದವರೆಗೂ ಯುಎಇಯಲ್ಲಿದ್ದರು.

"ಕಳೆದ ನಾಲ್ಕೂವರೆ ತಿಂಗಳುಗಳಲ್ಲಿ 22 ಬಾರಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೇನೆ, ಆದರೆ ಒಮ್ಮೆಯೂ ಪಾಸಿಟೀವ್ ಬಂದಿಲ್ಲ. ನನ್ನ ಸುತ್ತಮುತ್ತಲೇ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪದೇ ಪದೇ ಪರೀಕ್ಷೆಗೊಳಗಾಗಿದ್ದೆ ಎಂದು ವರ್ಚ್ಯುಯಲ್ ಮಾಧ್ಯಮ ಸಂವಾದದಲ್ಲಿ ಗಂಗೂಲಿ ಹೇಳಿದ್ದಾರೆ. ನಾನು ವಯಸ್ಸಾದ ಪೋಷಕರೊಂದಿಗೆ ಇದ್ದೇನೆ, ದುಬೈಗೆ ಪ್ರಯಾಣಿಸಿದ್ದರಿಂದ ನಾನು ಆತಂಕಕ್ಕೆ ಒಳಗಾಗಿದ್ದೆ ಎಂದೂ ಗಂಗೂಲಿ ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp