ಬೀದಿ ಬದಿ ವ್ಯಾಪಾರಿಯಿಂದ ಐಪಿಎಲ್ ಆಟಗಾರ! ಜೈಸ್ವಾಲ್ ರ ಇಂಟರ್ ರೆಸ್ಟಿಂಗ್ ಕ್ರಿಕೆಟ್ ಜೀವನದ ಕಥೆ

ತನ್ನ ಕ್ರಿಕೆಟ್ ಕನಸನ್ನು ನನಸು ಮಾಡಿಕೊಳ್ಳಲು ಹದಿಹರೆಯದ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ ಟೆಂಟ್ ಗಳಲ್ಲಿ ವಾಸಿಸುತ್ತಾ, ಬೀದಿ ಬದಿಯಲ್ಲಿ ವ್ಯಾಪಾರ ಮಾಡಿದ್ದಾರೆ. ಇದೀಗ ಐಪಿಎಲ್ ನಲ್ಲಿ ಟಾಪ್ ಸ್ಟಾರ್ ಗಳೊಂದಿಗೆ ಆಟ ಆಡುತ್ತಿದ್ದಾರೆ.
ಯಶಸ್ವಿ ಜೈಪಾಲ್
ಯಶಸ್ವಿ ಜೈಪಾಲ್

ಮುಂಬೈ: ತನ್ನ ಕ್ರಿಕೆಟ್ ಕನಸನ್ನು ನನಸು ಮಾಡಿಕೊಳ್ಳಲು ಹದಿಹರೆಯದ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ ಟೆಂಟ್ ಗಳಲ್ಲಿ ವಾಸಿಸುತ್ತಾ, ಬೀದಿ ಬದಿಯಲ್ಲಿ ವ್ಯಾಪಾರ ಮಾಡಿದ್ದಾರೆ. ಇದೀಗ ಐಪಿಎಲ್ ನಲ್ಲಿ ಟಾಪ್ ಸ್ಟಾರ್ ಗಳೊಂದಿಗೆ ಆಟ ಆಡುತ್ತಿದ್ದಾರೆ.

18 ವರ್ಷದ ಎಡಗೈ ಬ್ಯಾಟ್ಸ್‌ಮನ್ ಈ ವರ್ಷದ ಅಂಡರ್ -19 ವಿಶ್ವಕಪ್‌ನಲ್ಲಿ ಭಾರತ ಪರ ಆರು ಏಕದಿನ ಪಂದ್ಯಗಳಲ್ಲಿ 400 ರನ್ ಗಳಿಸಿದ್ದರು. ಆದರೆ, ರಾಜಸ್ಥಾನ ರಾಜಸ್ಥಾನ ತಂಡ ಅವರನ್ನು ಖರೀದಿಸಿದ ರೀತಿಯೂ ಬೆರಗು ಮೂಡಿಸಿತ್ತು. 

ಡಿಸೆಂಬರ್ ನಲ್ಲಿ ನಡೆದ ಐಪಿಎಲ್  ಹರಾಜಿನಲ್ಲಿ 2.4 ಕೋಟಿಗೆ ಸ್ವೀವ್ ಸ್ಮೀತ್ ನೇತೃತ್ವದ ತಂಡ ಖರೀದಿಸುವ ಮೂಲಕ ದುಬಾರಿ ಆಟಗಾರ ಎನಿಸಿಕೊಂಡರು.ಜೈ ಸ್ವಾಲ್ ಜೀವನ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಉತ್ತರ ಪ್ರದೇಶದ ಸಣ್ಣ ಪಟ್ಟಣದಿಂದ ಬಂದಿರುವ ಜೈಸ್ವಾಲ್  11 ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ, ಕ್ರಿಕೆಟ್ ಕೌಶಲ್ಯಗಳನ್ನು ಕಲಿತಿದ್ದಾರೆ.

ಆರಂಭದಲ್ಲಿ ಮುಂಬೈಯಲ್ಲಿ ಎಲ್ಲಿ ಉಳಿಯುವುದು ಎಂಬುದೇ ಕಠಿಣವಾಗಿತ್ತು. ಡೈರಿಯಲ್ಲಿ ಮಲಗುತ್ತಿದೆ. ನಂತರ ತಮ್ಮ ಸಂಬಂಧಿಯ ಮನೆಯಲ್ಲಿ  ಉಳಿದುಕೊಂಡೆ. ಆದರೆ, ಅದು ದೊಡ್ಡದಾಗಿರಲಿಲ್ಲ. ಬೇರೆ ಸ್ಥಳ ನೋಡಿಕೊಳ್ಳುವಂತೆ ಹೇಳಿದ್ದಾಗಿ ಜೈಸ್ವಾಲ್ ತಿಳಿಸಿದ್ದಾರೆ.

ತದ ನಂತರ, ಮುಂಬೈನ ಅಜಾದ್ ಮೈದಾನದ ಬಳಿ ಟೆಂಟ್ ನಲ್ಲಿ ಉಳಿಯಲು ಪ್ರಾರಂಭಿಸಿದೆ. ಹಗಲು ಹೊತ್ತಿನಲ್ಲಿ ಅಲ್ಲಿ ಕ್ರಿಕೆಟ್ ಆಡುತ್ತಿದೆ. ರಾತ್ರಿ ವೇಳೆಯಲ್ಲಿ ಪಾನಿಪೂರಿ ಮಾರುತಿದ್ದೆ. ಇದರಿಂದಾಗಿ ಆಹಾರಕ್ಕಾಗಿ ಹಣ ಸಂಪಾದನೆಗೆ ನೆರವಾಗುತಿತ್ತು ಎಂದು ಜೈಸ್ವಾಲ್  ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ.

ಕ್ಲಬ್ ಆಟಗಳಲ್ಲಿ ಚೆಂಡುಗಳನ್ನು ತರುವಲ್ಲಿ ಕೆಲಸ ಹಾಗೂ ಕೆಲವು ವೇಳೆ ಹೆಚ್ಚಿನ ರನ್ ಗಳಿಸುತ್ತಿದ್ದರಿಂದ ಸ್ವಲ್ಪ ಹಣ ಗಳಿಸಲು ನೆರವಾಗುತಿತ್ತು. ಅವರು ಮುಂಬೈ ತಂಡದಲ್ಲಿ ಸ್ಥಾನ ಗಳಿಸಿ 17 ವರ್ಷದೊಳಗಿನ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದ ನಂತರ 292 ದಿನಗಳಲ್ಲಿ ಒಂದು ದಿನದಲ್ಲಿ ಡಬಲ್ ಸೆಂಚುರಿ ಮೂಲಕ ಅವರ ಪ್ರಯತ್ನ ಪ್ರಾರಂಭವಾಯಿತು.

ರಾಜಸ್ಥಾನ ರಾಯಲ್ಸ್ ತಂಡ 12 ಬಾರಿ 20 ಲಕ್ಷ ರೂ. ಮೊತ್ತದಲ್ಲಿ ಜೈಸ್ವಾಲ್ ಅವರನ್ನು ಖರೀದಿಸಿದದ್ದು,  ಅವರ ಕುಟುಂಬಕ್ಕೆ ದೊಡ್ಡ ದಿನಗಳಾಗಿತ್ತು.ಮುಂಬೈನಲ್ಲಿ ಕಷ್ಟದ ದಿನಗಳಲ್ಲಿ ನೆರವು ನೀಡಿದ್ದ ಕೋಚ್ ಜ್ವಾಲಾ ಸಿಂಗ್ ಅವರಿಗೆ ಕ್ರೆಡಿಟ್ ಸಲ್ಲಬೇಕೆಂದು ಹೇಳುತ್ತಾರೆ.

ಮುಂಬೈನಲ್ಲಿ ತರಬೇತಿ ಆರಂಭಿಸಿದಾಗ ಮರಳಿ ಮನೆಗೆ ಬರುವಂತೆ ತಮ್ಮ ತಂದೆ ಹೇಳುತ್ತಾರೆ. ಆದರೆ, ಅಲ್ಲಿಯೇ ಇರಲು ಇಷ್ಟ ಇತ್ತು. ಒಂದು ದಿನ ತರಬೇತಿ ಮುಗಿಸಿದ ಬಳಿಕ ಕೋಚ್ ಜ್ವಾಲಾ ಸಿಂಗ್ ಅವರನ್ನು ಭೇಟಿ ಮಾಡಿದೆ. ನಂತರ ಅವರು ಊಟ, ವಸತಿ ಕಲ್ಪಿಸುವ ಮೂಲಕ ದೊಡ್ಡ ನೆರವು ನೀಡಿದ್ದಾಗಿ ಜೈಸ್ವಾಲ್ ನೆನಪಿಕೊಳ್ಳುತ್ತಾರೆ.

ಐಪಿಎಲ್ ನಲ್ಲಿ ಎಲ್ಲ ಶ್ರೇಷ್ಠ ಆಟಗಾರರೊಂದಿಗೆ ಮಾತನಾಡುವುದು ತುಂಬಾ ಖುಷಿ ತಂದಿದೆ. ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ನನ್ನ ಆಟವನ್ನು ಸುಧಾರಿಸಲು ಸಹಾಯ ಮಾಡುವಂತಹ ವಿಷಯಗಳನ್ನು ಎತ್ತಿಕೊಳ್ಳುತ್ತಿದ್ದೇನೆ ಎಂದು ಹೇಳಿರುವ ಜೈಸ್ವಾಲ್, ನಾಯಕ ಸ್ಟೀವ್ ಸ್ಮಿತ್ ಅವರ ಬೆಂಬಲವನ್ನು ಪಡೆದಿರುವುದು ಒಳ್ಳೆಯದು. ಅವರು ತುಂಬಾ ಸಹಾಯ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಆರಾಧಿಸುವ ಜೈಸ್ವಾಲ್ ಅವರ ದಾಖಲೆಯನ್ನು ಮುರಿಯುವುದು ಮನದೊಳಗಿದ್ದರೂ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚಿಗೆ ಯೋಚಿಸದೆ ಕೆಲಸದ ಕಡೆಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com