ಕೆಕೆಆರ್ ವಿರುದ್ಧ ಸಿಎಸ್ ಕೆ ತಂಡ ಸೋಲು: ಎಂಎಸ್ ಧೋನಿ ಪುತ್ರಿ ಜಿವಾಗೆ ಅತ್ಯಾಚಾರ ಬೆದರಿಕೆ!

ಕಳೆದ ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡ ನಂತರ ಸೋಷಿಯಲ್ ಮೀಡಿಯಾ ಟ್ರೋಲ್ಸ್ ನಲ್ಲಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರ 5 ವರ್ಷದ ಪುತ್ರಿ ಜೀವಾ ಧೋನಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬಂದಿದೆ.

Published: 10th October 2020 10:14 AM  |   Last Updated: 10th October 2020 12:23 PM   |  A+A-


M S Dhoni and Ziva Dhoni(File photo)

ಎಂ ಎಸ್ ಧೋನಿ ಮತ್ತು ಜೀವಾ ಧೋನಿ(ಸಂಗ್ರಹ ಚಿತ್ರ)

Posted By : Sumana Upadhyaya
Source : The New Indian Express

ನವದೆಹಲಿ: ಕಳೆದ ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡ ನಂತರ ಸೋಷಿಯಲ್ ಮೀಡಿಯಾ ಟ್ರೋಲ್ಸ್ ನಲ್ಲಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರ 5 ವರ್ಷದ ಪುತ್ರಿ ಜೀವಾ ಧೋನಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬಂದಿದೆ.

168 ರನ್ ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ಸಿಎಸ್ ಕೆ ತಂಡ ಕೆಕೆಆರ್ ವಿರುದ್ಧ 10 ರನ್ ಗಳ ಸೋಲು ಕಂಡಿತ್ತು. ಇದಾದ ಬಳಿಕ ಎಂ ಎಸ್ ಧೋನಿಯವರ ಪತ್ನಿ ಸಾಕ್ಷಿ ಸಿಂಗ್ ಧೋನಿಯವರ ಇನ್ಸ್ಟಾಗ್ರಾಂ ಖಾತೆಗೆ ಬೆದರಿಕೆ ಬಂದಿದೆ.

ಈ ಬೆದರಿಕೆ ನಂತರ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ, ನಮ್ಮ ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಕೇಳಿದ್ದಾರೆ. ನಟಿ ಹಾಗೂ ರಾಜಕಾರಣಿ ನಗ್ಮಾ ಟ್ವೀಟ್ ಮಾಡಿ, ನಾವು ಎತ್ತ ಸಾಗುತ್ತಿದ್ದೇವೆ, ಸಿಎಸ್ ಕೆ ಕೆಕೆಆರ್ ವಿರುದ್ಧ ಸೋತಿದ್ದಕ್ಕೆ ಧೋನಿಯವರ 5 ವರ್ಷದ ಪುಟ್ಟ ಮಗಳು ಜೀವಾಗೆ ಬೆದರಿಕೆ ಬರುತ್ತಿರುವುದು ತೀರಾ ಅಸಹ್ಯಕರ, ಪ್ರಧಾನ ಮಂತ್ರಿಯವರೇ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ್ದಾರೆ.

ಕರ್ನಾಟಕದ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ, ಇದು ತೀರಾ ದುರದೃಷ್ಟಕರ, ಏನಾಗುತ್ತಿದೆ ನಮ್ಮ ದೇಶದಲ್ಲಿ ಎಂದು ಪ್ರಶ್ನಿಸಿದ್ದಾರೆ.

ಸೋಷಿಯಲ್ ಮೀಡಿಯಾಗಳನ್ನು ಯಾವ ರೀತಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಇನ್ನು ಸಿಎಸ್ ಕೆ ತಂಡದ ಸೋಲನ್ನು ಅರಗಿಸಿಕೊಳ್ಳಲಾಗದ ಧೋನಿ ಅಭಿಮಾನಿಗಳು ಅವರ ಮನೆಗೆ ಕಲ್ಲೆಸೆದಿದ್ದು ಮಾತ್ರವಲ್ಲದೆ ಅವರ ಪೋಸ್ಟರ್ ಗಳನ್ನು ಹರಿದು ಅವಹೇಳನ ಮಾಡಿದ್ದಾರೆ. ಆದರೆ ಆಟಗಾರರೊಬ್ಬರ ಮಗಳನ್ನು ಗುರಿಯಾಗಿರಿಸಿಕೊಂಡು ಈ ರೀತಿ ಬೆದರಿಕೆ, ಟೀಕೆ ಮಾಡುತ್ತಿರುವುದು ಇದೇ ಮೊದಲು ಎನ್ನಬಹುದು.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp