ಮಗನ ಫೋಟೊ ಶೇರ್ ಮಾಡಿ, ಐಪಿಎಲ್‌ಗೆ ಅವಕಾಶ ಕೇಳಿದ ಕರೀನಾ ಕಪೂರ್‌

ಕಳೆದ 2008ರ ಆವೃತ್ತಿಯಿಂದ ಇಲ್ಲಿವರೆಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇಡೀ ವಿಶ್ವಾದಾದ್ಯಂತ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸುತ್ತಿದೆ ಹಾಗೂ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಲೀಗ್ ಆಗಿ ಬೆಳೆದು ನಿಂತಿದೆ. ಈ ಬಾರಿ ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ 2020ರ ಐಪಿಎಲ್‌ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸುತ್ತಿರುವುದು ವಿಶೇಷ.

Published: 15th October 2020 06:35 PM  |   Last Updated: 15th October 2020 06:35 PM   |  A+A-


Taimur-kareena

ತೈಮೂರು-ಕರೀನಾ

Posted By : Vishwanath S
Source : Online Desk

ನವದೆಹಲಿ: ಕಳೆದ 2008ರ ಆವೃತ್ತಿಯಿಂದ ಇಲ್ಲಿವರೆಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇಡೀ ವಿಶ್ವಾದಾದ್ಯಂತ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸುತ್ತಿದೆ ಹಾಗೂ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಲೀಗ್ ಆಗಿ ಬೆಳೆದು ನಿಂತಿದೆ. ಈ ಬಾರಿ ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ 2020ರ ಐಪಿಎಲ್‌ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸುತ್ತಿರುವುದು ವಿಶೇಷ.

ಐಪಿಎಲ್‌ ಟೂರ್ನಿಯು ಬಾಲಿವುಡ್‌ ಸೂಪರ್‌ ಸ್ಟಾರ್‌ಗಳನ್ನೂ ಆಕರ್ಷಣೆ ಮಾಡುವುದು ಸಹಜ. ಇತ್ತೀಚೆಗೆ ಕರೀನಾ ಕಪೂರ್‌ ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಮಗ ತೈಮುರ್‌ ಬ್ಯಾಟಿಂಗ್‌ ಮಾಡುತ್ತಿರುವ ಫೋಟೊವನ್ನು ಶೇರ್‌ ಮಾಡಿದ್ದರು. ಐಪಿಎಲ್‌ನಲ್ಲಿ ಯಾವುದಾದರು ತಂಡದಲ್ಲಿ ಸ್ಥಾನವಿದೆಯೇ? ನಾನು ಕೂಡ ಆಡುತ್ತೇನೆ ಎಂಬ ಶೀರ್ಷಿಕೆಯನ್ನು ನೀಡಿದ್ದರು.

ಪ್ರಸಕ್ತ ಆವೃತ್ತಿಯಲ್ಲಿ ಅದ್ಬುತ ಲಯದೊಂದಿಗೆ ಮುಂದುವರಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, ಕರೀನಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿತು. "ಅವರು ನಮ್ಮೊಂದಿಗೆ ಘರ್ಜಿಸುವುದನ್ನು ನೋಡಲು ನಾವು ಇಷ್ಟಪಡುತ್ತೇವೆ. ನಿಜವಾದ ನವಾಬ್ ಯಾವಾಗಲೂ ರಾಜಧಾನಿಗೆ ಸೇರಿದವನು ಎಂದು ಡಿಸಿ  ಕಾಮೆಂಟ್‌ ಮಾಡಿದೆ.

 
 
 
 
 
 
 
 
 
 
 
 
 

Any place in the IPL? I can play too

A post shared by Kareena Kapoor Khan (@kareenakapoorkhan) on

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp