ಐಪಿಎಲ್ 2020: ಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್ ನೂತನ ನಾಯಕ
ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಶುಕ್ರವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಇಂಗ್ಲೆಂಡ್ ತಂಡದ ಉಪ ನಾಯಕ ಇಯಾನ್ ಮಾರ್ಗನ್ ಗೆ ಹಸ್ತಾಂತರಿಸಿದ್ದಾರೆ.
Published: 16th October 2020 03:01 PM | Last Updated: 16th October 2020 03:05 PM | A+A A-

ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್
ದುಬೈ: ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಶುಕ್ರವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಇಂಗ್ಲೆಂಡ್ ತಂಡದ ಉಪ ನಾಯಕ ಇಯಾನ್ ಮಾರ್ಗನ್ ಗೆ ಹಸ್ತಾಂತರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಈ ಮಹತ್ವದ ಬದಲಾವಣೆಯಾಗಿದೆ.
ಬ್ಯಾಟಿಂಗ್ ಕಡೆಗೆ ಗಮನ ಹರಿಸಬೇಕಾದ್ದರಿಂದ ಮತ್ತು ತಂಡಕ್ಕೆ ಮತ್ತಷ್ಟು ಕೊಡುಗೆ ನೀಡಬೇಕಾಗಿರುವುದರಿಂದ ನಾಯಕತ್ವ ತ್ಯಜಿಸುವುದಾಗಿ ಕೆಕೆಆರ್ ನಿರ್ವಹಣಾ ಸಮಿತಿಗೆ ಕಾರ್ತಿಕ್ ತಿಳಿಸಿದ್ದಾರೆ.
'ತಂಡವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿ ಇರಿಸಿರುವ ದಿನೇಶ್ ಕಾರ್ತಿಕ್ ಅವರಂತಹ ನಾಯಕರನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಅವರ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು ಎಂದು ತಂಡದ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.
ಈ ಮಧ್ಯೆ ದಿನೇಶ್ ಕಾರ್ತಿಕ್ ಅವರ ನಿರ್ಧಾರ ಅಚ್ಚರಿ ಉಂಟು ಮಾಡಿದೆ. ಅವರ ನಿರ್ಧಾರವನ್ನು ನಾವೆಲ್ಲ ಗೌರವಿಸುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕು ಗೆಲುವು, ಮೂರು ಸೋಲಿನೊಂದಿಗೆ ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದೆ. ದಿನೇಶ್ ಕಾರ್ತಿಕ್ ಹಾಗೂ ಇಯಾನ್ ಟೂರ್ನಿಯಲ್ಲಿ ಒಟ್ಟಾಗಿ ಚತುರತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯೂ.,ಇಯಾನ್ ನಾಯಕತ್ವ ವಹಿಸಿಕೊಂಡಿರುವುದು ಪರಿಣಾಮಕಾರಿ ಪಾತ್ರ ನಿರ್ವಹಿಸಲಿದೆ. ಈ ಬದಲಾವಣೆ ತಡೆರಹಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸುತ್ತೇವೆ ಎಂದು ವೆಂಕಿ ಮೈಸೂರು ಹೇಳಿದ್ದಾರೆ.
"DK and Eoin have worked brilliantly together during this tournament and although Eoin takes over as captain, this is effectively a role swap," says CEO and MD @VenkyMysore #IPL2020 #KKR https://t.co/6dwX45FNg5
— KolkataKnightRiders (@KKRiders) October 16, 2020
ಕಳೆದ ಎರಡೂವರೆ ವರ್ಷಗಳಿಂದಲೂ ನಾಯಕರಾಗಿ ಕೊಡುಗೆ ಸಲ್ಲಿಸಿರುವುದಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಕೃತಜ್ಞತೆ ಸಲ್ಲಿಸುತ್ತಾ, ಇಯಾನ್ ಮಾರ್ಗನ್ ನಾಯಕರಾಗಿ ಅತ್ಯುತ್ತಮ ರೀತಿಯಲ್ಲಿ ಮುಂದುವರೆಯಲಿ ಎಂದು ಹಾರೈಸುವುದಾಗಿ ಅವರು ಹೇಳಿದ್ದಾರೆ.
ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ನಾಯಕತ್ವ ಈವರೆಗೆ ಸ್ಥಿರ ಪ್ರದರ್ಶನ ತೋರದೆ ತೀವ್ರ ಟೀಕೆಗೆ ಗುರಿಯಾಗಿತ್ತು.