ಕ್ರಿಕೆಟ್ ಗೆ ವಿದಾಯ ಹೇಳಿದ  2008ರ ಅಂಡರ್ -19 ವಿಶ್ವಕಪ್ ಹೀರೋ!

2008 ರಲ್ಲಿ ಭಾರತದ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ಬಾಗವಾಗಿದ್ದ  ಎಡಗೈ ಬ್ಯಾಟ್ಸ್‌ಮನ್ ತನ್ಮಯ್ ಶ್ರೀವಾಸ್ತವಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ತನ್ಮಯ್ ಶ್ರೀವಾಸ್ತವ
ತನ್ಮಯ್ ಶ್ರೀವಾಸ್ತವ

ನವದೆಹಲಿ: 2008 ರಲ್ಲಿ ಭಾರತದ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ಬಾಗವಾಗಿದ್ದ  ಎಡಗೈ ಬ್ಯಾಟ್ಸ್‌ಮನ್ ತನ್ಮಯ್ ಶ್ರೀವಾಸ್ತವಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

2008 ರಲ್ಲಿ ಅಂಡರ್ -19 ವಿಶ್ವಕಪ್‌ನ 6 ಪಂದ್ಯಗಳಲ್ಲಿ 262 ರನ್ ಗಳಿಸಿದ ಉತ್ತರ ಪ್ರದೇಶದ ಕಾನ್ಪುರ ಮೂಲದ ತನ್ಮಯ್ ಅತಿ ಹೆಚ್ಚು ಸ್ಕೋರ್ ಮಾಡಿದ್ದ ಆಟಗಾರರೆನಿಸಿದ್ದರು.

30 ವರ್ಷದ ಶ್ರೀವಾಸ್ತವ ಅವರು ನಿವೃತ್ತಿ ಬಗ್ಗೆ ಟ್ವಿಟ್ತರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ನನ್ನ ಕ್ರಿಕೆಟಿಂಗ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಮಯ, ನಾನು ಈ ವರ್ಷಗಳಲ್ಲಿ ಜೂನಿಯರ್ ಕ್ರಿಕೆಟ್, ರಣಜಿ  ಟ್ರೋಫಿ ಆಡುತ್ತಿದ್ದೆ, ಮುಖ್ಯವಾಗಿ 2008 ರ ಅಂಡರ್ -19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದು ತಂದ ತಂಡದಲ್ಲಿದ್ದೆ"

'ನಾನು ಗ್ರೀನ್ ಪಾರ್ಕ್ ಕ್ರಿಕೆಟ್ ಹಾಸ್ಟೆಲ್ ಗೆ ಸೇರಿದಾಗ ನನಗೆ 11 ವರ್ಷ ವಯಸ್ಸಾಗಿತ್ತು,. 13 ನೇ ವಯಸ್ಸಿನಲ್ಲಿ, ನಾನು ಭಾರತ ಅಂಡರ್ -15 ಅನ್ನು ಪ್ರತಿನಿಧಿಸಿದೆ ಮತ್ತು ನಾನು ಭಾರತೀಯ ಜರ್ಸಿಯನ್ನು ಧರಿಸಿದಾಗ ಅದು ನನ್ನ ಕನಸು ನನಸಾದ ಕ್ಷಣವಾಗಿತ್ತು. . 2008 ರ ವರ್ಷವು ಅಂಡರ್ -19 ವಿಶ್ವಕಪ್ ಗೆಲ್ಲುವುದು ನಮ್ಮ ಗುರಿಯಾಗಿತ್ತು.ಹಾಗೂ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಿದ್ದ ನೆನಪು ಸದಾ ಹಸಿರಾಗಿದೆ.

ತರಬೇತುದಾರರು, ಉತ್ತರ ಪ್ರದೇಶ ಕ್ರಿಕೆಟ್ ಆಡಳಿತಾಧಿಕಾರಿಗಳು, ಪೋಷಕರು, ಸ್ನೇಹಿತರು ಮತ್ತುಪತ್ನಿ ಸೇರಿ ನಿರಂತರ ಬೆಂಬಲಿಸಿದ ಎಲ್ಲರಿಗೆ ಅವರು ಧನ್ಯವಾದ ಹೇಳಿದ್ದಾರೆ

ತನ್ಮಯ್ 90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ ಹತ್ತು ಶತಕ ಮತ್ತು 27 ಅರ್ಧಶತಕಗಳೊಂದಿಗೆ ಒಟ್ಟು 4918 ರನ್ ಗಳಿಸಿದ್ದಾರೆ. ಆದಾಗ್ಯೂ, ಹಿರಿಯ ರಾಷ್ಟ್ರೀಯ ತಂಡಕ್ಕೆ ಅವರು ಎಂದಿಗೂ ಆಕ್=ಯ್ಕೆಯಾಗಿಲ್ಲಅವರು ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ ನಂತರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತರಾಖಂಡದ ನಾಯಕತ್ವ ವಹಿಸಿದ್ದರು

ಐಪಿಎಲ್‌ನಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಈಗ ಅಸ್ತಿತ್ವದಲ್ಲಿಲ್ಲದ  ಕೊಚ್ಚಿ ಟಸ್ಕರ್ಸ್ ಪರ ಆಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com