ಶತಕ ಗಳಿಸಿದ್ರೂ ಪಂದ್ಯ ಗೆಲ್ಲಿಸಲಾಗಲಿಲ್ಲ, 1 ರನ್ ಓಡದ ಸಂಜು ಸ್ಯಾಮ್ಸನ್: ನೆಟ್ಟಿಗರ ಕಿಡಿ

ಐಪಿಎಲ್ 14ನೇ ಆವೃತ್ತಿಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಶತಕ ಗಳಿಸಿದ್ದರೂ ಪಂದ್ಯ ಗೆಲ್ಲಿಸುವಲ್ಲಿ ಸೋತು ಹೋಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. 
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್
Updated on

ಮುಂಬೈ: ಐಪಿಎಲ್ 14ನೇ ಆವೃತ್ತಿಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಶತಕ ಗಳಿಸಿದ್ದರೂ ಪಂದ್ಯ ಗೆಲ್ಲಿಸುವಲ್ಲಿ ಸೋತು ಹೋಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. 

ಪಂಜಾಬ್ ಮತ್ತು ರಾಜಸ್ತಾನ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಪೇರಿಸಿತ್ತು. 222 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ರಾಜಸ್ತಾನಕ್ಕೆ ಕೊನೆಯ ಓವರ್ ನಲ್ಲಿ 13 ರನ್ ಗಳ ಅಗತ್ಯವಿತ್ತು.

ಅರ್ಷ್ ದೀಪ್ ಕೊನೆಯ ಓವರ್ ಬೌಲಿಂಗ್ ಮಾಡಿದ್ದು ಮೊದಲ ಎಸೆತದಲ್ಲಿ ರನ್ ಬಂದಿರಲಿಲ್ಲ. ಎರಡನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದರು. ಮೂರನೇ ಎಸೆತದಲ್ಲಿ ಕ್ರಿಸ್ ಮೊರಿಸ್ 1 ರನ್ ತೆಗೆದುಕೊಂಡಿದ್ದರು. ನಾಲ್ಕನೇ ಎಸೆತದಲ್ಲಿ ಸ್ಯಾಮ್ಸನ್ 6 ಬಾರಿಸಿದ್ದರು. ಇನ್ನು ಎರಡು ಎಸೆತದಲ್ಲಿ 5 ರನ್ ಬೇಕಿತ್ತು. ಐದನೇ ಎಸೆತದಲ್ಲಿ ಸ್ಯಾಮ್ಸನ್ ಸಿಂಗಲ್ ಗೆ ತೆಗೆದುಕೊಳ್ಳಲುವ ಅವಕಾಶವಿದ್ದರೂ ಓಡಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಸ್ಫೋಟಕ ಹೊಡೆತಕ್ಕೆ ಮುಂದಾಗಿ ಓಟಾದರೂ, ಹೀಗಾಗಿ ರಾಯಲ್ಸ್ ತಂಡ 4 ರನ್ ಗಳಿಂದ ಪಂಜಾಬ್ ಗೆ ಶರಣಾಯಿತು. 

ಸಂಜು ಸ್ಯಾಮ್ಸನ್ ಒಂದು ರನ್ ತೆಗೆದುಕೊಂಡಿದ್ದರೆ ಆಗ ತಂಡದ ಮೇಲೆ ಒತ್ತಡ ಕಡಿಮೆಯಾಗುತ್ತಿತ್ತು. ಸಿಕ್ಸರ್ ಹೊಡೆಯುವ ಬದಲು ಬೌಂಡರಿ ಹೊಡೆಯಬಹುದಿತ್ತು ಎಂದು ನೆಟ್ಟಿಗರು ಸ್ಯಾಮ್ಸನ್ ವಿರುದ್ಧ ಕಿಡಿಕಾರುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com