ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈಯ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕೆವೈಸಿ ಅಪ್ ಡೇಟ್ ನೆಪದಲ್ಲಿ 1, 13,998 ರೂಪಾಯಿ ವಂಚಿಸಲಾಗಿದೆ ಎಂದು ವಿನೋದ್ ಕಾಂಬ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಮಾಜಿ ಕ್ರಿಕೆಟ್ ಆಟಗಾರರಾಗಿರುವ ವಿನೋದ್ ಕಾಂಬ್ಳಿ ಸಚಿನ್ ತೆಂಡೊಲ್ಕರ್ ಜೊತೆಗೆ ಶಾಲಾ ಕ್ರಿಕೆಟ್ ನಲ್ಲಿ 664 ರನ್ ಗಳ ಜೊತೆಯಾಟ ಪ್ರಸಿದ್ಧಿ ಹೊಂದಿದ್ದರು, ತಮ್ಮ ನಿರೀಕ್ಷಿತ ಸಾಧನೆಯ ಮಟ್ಟವನ್ನು ತಲುಪಲಿಲ್ಲ.
17 ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಶತಕ, 3 ಅರ್ಧ ಶತಕಗಳೊಂದಿಗೆ 1048 ರನ್ ಹಾಗೂ 104 ಏಕದಿನ ಪಂದ್ಯಗಳಲ್ಲಿ 2 ಶತಕ, 14 ಅರ್ಧಶತಕದೊಂದಿಗೆ 2477 ರನ್ ಗಳ ಸಾಧನೆಯನ್ನು ವಿನೋದ್ ಕಾಂಬ್ಳಿ ಹೊಂದಿದ್ದಾರೆ.
Advertisement