ಬೆಂಗಳೂರಿನ ಎನ್‌ಸಿಎನಲ್ಲಿ ರೋಹಿತ್ ಶರ್ಮಾ; ಅಂಡರ್-19 ತಂಡದೊಂದಿಗೆ ಸಮಾಲೋಚನೆ; ಆಟಗಾರರಿಗೆ ಟಿಪ್ಸ್!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ಟಿ-20 ಹಾಗೂ ಒಂದು ದಿನ ತಂಡದ ನಾಯಕ ರೋಹಿತ್ ಶರ್ಮಾ ಈಗ ಏನು ಮಾಡುತ್ತಿದ್ದಾರೆ  ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡತೊಡಗಿದೆ
ಆಟಗಾರರಿಗೆ ರೋಹಿತ್ ಶರ್ಮಾ ಟಿಪ್ಸ್
ಆಟಗಾರರಿಗೆ ರೋಹಿತ್ ಶರ್ಮಾ ಟಿಪ್ಸ್

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ಟಿ-20 ಹಾಗೂ ಒಂದು ದಿನ ತಂಡದ ನಾಯಕ ರೋಹಿತ್ ಶರ್ಮಾ ಈಗ ಏನು ಮಾಡುತ್ತಿದ್ದಾರೆ  ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡತೊಡಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಅಂಡರ್-19 ಆಟಗಾರರಿಗೆ ಟಿಪ್ಸ್ ನೀಡುವ ಕೆಲಸವನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಮಾಡುತ್ತಿದ್ದಾರೆ ಎಂದು ಹೇಳಿದೆ.ನಗಾಯಗೊಂಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿ (ಎನ್‌ಸಿಎ)ನಲ್ಲಿ ರಿಹ್ಯಾಬಿಟೇಷನ್ (ಗಾಯದಿಂದ ಚೇತರಿಸಿಕೊಳ್ಳುವುದು) ಸೆಂಟರ್ ನಲ್ಲಿ ಉಳಿದುಕೊಂಡಿದ್ದಾರೆ. ಆದರೆ, ರೋಹಿತ್ ಶರ್ಮಾ ಆಗಮನಕ್ಕೂ ಮುನ್ನವೇ ಎನ್‌ಸಿಎನಲ್ಲಿ ಭಾರತದ ಅಂಡರ್-19 ತಂಡ ಕೂಡ ಏಷ್ಯಾಕಪ್ ಗಾಗಿ ತಯಾರಿ ನಡೆಸುತ್ತಿದೆ.

ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ರೋಹಿತ್ ಶರ್ಮಾ, ಯುವ ಆಟಗಾರರಿಗೆ ಟಿಪ್ಸ್ ನೀಡುತ್ತಿರುವುದು ಕಂಡುಬಂದಿದೆ. ಅಂಡರ್-19 ತಂಡವು ಡಿಸೆಂಬರ್ 23 ರಿಂದ ಯುಎಇಯಲ್ಲಿ ಏಷ್ಯಾಕಪ್ ಆಡಲಿದೆ.

ರೋಹಿತ್ ಈ ಆಟಗಾರರೊಂದಿಗಿನ ಫೋಟೋ ಹಂಚಿಕೊಂಡಿದ್ದು, ಭಾರತೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ ಎಂಬ ಹಣೆಬರಹದಲ್ಲಿ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದೆ. ಎನ್ ಸಿಎಯಲ್ಲಿ ಆಯೋಜಿಸಿರುವ ಶಿಬಿರದಲ್ಲಿ 19 ವರ್ಷದೊಳಗಿನವರ ತಂಡದ 25 ಆಟಗಾರರು ಆಯ್ಕೆಗೊಂಡಿದ್ದು, ಡಿಸೆಂಬರ್ 19ರವರೆಗೆ ತರಬೇತಿ ಪಡೆಯಲಿದ್ದಾರೆ.

ಮಹತ್ವದ ಟೆಸ್ಟ್ ಸರಣಿಯಿಂದ ದೂರ ಉಳಿದ ರೋಹಿತ್

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಡಿಸೆಂಬರ್ 26ರಿಂದ ಮೊದಲ ಟೆಸ್ಟ್ ಪಂದ್ಯವನ್ನು ಆ ದೇಶದೊಂದಿಗೆ ಆಡಲಿದೆ. ಈ ಟೆಸ್ಟ್ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈವರೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡ, ಯಾವುದೇ ಟೆಸ್ಟ್ ಸರಣಿಯನ್ನು ಈವರೆಗೆ ಗೆದ್ದುಕೊಂಡಿಲ್ಲ. ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರನ್ನು ಏಕದಿನ ಮತ್ತು ಟಿ 20 ನಾಯಕರನ್ನಾಗಿ ಮಾಡಲಾಗಿದೆ. ಇದಾದ ನಂತರ ಇಬ್ಬರೂ ಆಟಗಾರರು ನಿರಂತರ ವಿವಾದದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಪಿಚ್ ಗಳು ಸ್ವಿಂಗ್, ವೇಗ ಮತ್ತು ಬೌನ್ಸ್‌ಗೆ ಹೆಸರುವಾಸಿಯಾಗಿದೆ. ಇಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕಲು ಸಾಕಷ್ಟು ಪರದಾಡುತ್ತಾರೆ. ಇದೇ ಸಮಯದಲ್ಲಿ, ಕಳೆದ ಒಂದು ವರ್ಷದಿಂದ ರೋಹಿತ್ ಶರ್ಮಾ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಗೆ ಗಾಯದ ಸಮಸ್ಯೆಯಿಂದಾಗಿ ಹಿಂದೆ ಸರಿದಿರುವುದು ತಂಡಕ್ಕೆ ನಷ್ಟವಾಗಲಿದೆ.

ಏಕದಿನ ಸರಣಿಗೆ ಲಭ್ಯರಾಗುತ್ತಾರಾ ಹಿಟ್ ಮ್ಯಾನ್?

ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಲಭ್ಯರಾಗುವ ಸಾಧ್ಯತೆ ಇದೆ. ಮುಂಬೈನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಟೆಸ್ಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ರೋಹಿತ್ ಮಂಡಿ ಗಾಯದಿಂದ ಬಳಲುತ್ತಿದ್ದು, ಟೆಸ್ಟ್ ಸರಣಿಗೆ ಅಲಭ್ಯರಾಗಿರುತ್ತಾರೆ ಎಂದು ಈ ಹಿಂದೆ ಬಿಸಿಸಿ ಹೇಳಿತ್ತು.

ಕಳೆದ ತಿಂಗಳು ತವರಿನಲ್ಲಿ ನಡೆದ ನ್ಯೂಜಿಲೆಂಡ್ ಟೆಸ್ಟ್ ಸರಣಿಯ ವೇಳೆ ಮೊಣಕಾಲಿನ ಗಾಯದಿಂದಾಗಿ ಜಡೇಜಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು. ಅವರು ತಮ್ಮ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com