ಎರಡನೇ ಬಾರಿಗೆ ತಂದೆಯಾದ ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಭಜ್ಜಿ ಪತ್ನಿ, ನಟಿ ಗೀತಾ ಬಾಸ್ರಾ ಅವರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 
ಹರ್ಭಜನ್ ಸಿಂಗ್ ಗೀತಾ ಬಾಸ್ರಾ
ಹರ್ಭಜನ್ ಸಿಂಗ್ ಗೀತಾ ಬಾಸ್ರಾ
Updated on

ನವದೆಹಲಿ: ಟೀಂ ಇಂಡಿಯಾದ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಭಜ್ಜಿ ಪತ್ನಿ, ನಟಿ ಗೀತಾ ಬಾಸ್ರಾ ಅವರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಈ ವಿಷಯವನ್ನು ಹರ್ಭಜನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ದೇವರ ಅನುಗ್ರಹದಿಂದ ಗೀತಾ, ಮಗು ಕ್ಷೇಮ ಹಾಗೂ ಆರೋಗ್ಯವಾಗಿದ್ದಾರೆ . " ನಾವು ಕೈ ಹಿಡಿದು ನಡೆಸಲು ಒಂದು ಪುಟ್ಟ ಕೈ ... ತಮ್ಮ ಪ್ರೀತಿ ಸ್ವರ್ಣದಂತೆ ಅಮೂಲ್ಯವಾದುದು ... ಅದ್ಭುತ ಉಡುಗೊರೆ ... ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ಜೀವನ ಪರಿಪೂರ್ಣವಾಗಿದೆ, ”ಎಂದು ಭಜ್ಜಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

2015 ರ ಅಕ್ಟೋಬರ್ 29 ರಂದು ವಿವಾಹವಾಗಿದ್ದ ಹರ್ಭಜನ್ ಸಿಂಗ್ - ಗೀತಾ ಬಸ್ರಾ ದಂಪತಿಗೆ ಮಗಳಿದ್ದಾಳೆ. ಅವರ ವೃತ್ತಿ ಜೀವನದಲ್ಲಿ ... ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಭಜ್ಜಿ ಅನೇಕ ಸ್ಮರಣೀಯ ವಿಜಯಗಳಲ್ಲಿ ಸಹಭಾಗಿಯಾಗಿದ್ದಾರೆ. ಐಪಿಎಲ್ -2021 ಸೀಸನ್‌ ನಲ್ಲಿ ಅವರು ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದರು. ಗೀತಾ ಬಾಸ್ರಾ ಅವರು "ದಿಲ್ ದಿಯಾ ಹೈ" ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com