ಶಿಖರ್ ಧವನ್
ಶಿಖರ್ ಧವನ್

ಶ್ರೀಲಂಕಾ ಪ್ರವಾಸ: ಸೋಮವಾರದಿಂದ ಧವನ್ ನೇತೃತ್ವದ ಟೀಂ ಇಂಡಿಯಾ ಆಟಗಾರರಿಗೆ 14 ದಿನ ಕ್ವಾರಂಟೈನ್!

ಶ್ರೀಲಂಕಾ ವಿರುದ್ಧದ ಮೂರು ಅಂತಾರಾಷ್ಟ್ರೀಯ  ಏಕದಿನ ಪಂದ್ಯಕ್ಕಾಗಿ ಸಿದ್ದತೆಯಲ್ಲಿ ತೊಡಗಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ಸೋಮವಾರದಿಂದ ಭಾರತದಲ್ಲಿ 14 ದಿನಗಳ ಕ್ವಾರಂಟೈನ್ ಗೆ ಒಳಪಡಲಿದೆ.
Published on

ನವದೆಹಲಿ: ಶ್ರೀಲಂಕಾ ವಿರುದ್ಧದ ಮೂರು ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕಾಗಿ ಸಿದ್ದತೆಯಲ್ಲಿ ತೊಡಗಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ಸೋಮವಾರದಿಂದ ಭಾರತದಲ್ಲಿ 14 ದಿನಗಳ ಕ್ವಾರಂಟೈನ್ ಗೆ ಒಳಪಡಲಿದೆ. ಕೊಲೊಂಬೊದಲ್ಲಿ ಮತ್ತೊಂದು ಹಂತದ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ.

ಟೀಂ ಇಂಡಿಯಾ ಆಟಗಾರರು ಶ್ರೀಲಂಕಾ ಎ ಟೀಮ್ ವಿರುದ್ಧ ಕೆಲವೊಂದು ಪಂದ್ಯಗಳನ್ನಾಡಲು ಬಯಸಿದ್ದರು. ಆದರೆ, ಕೋವಿಡ್ ಪರಿಸ್ಥಿತಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಟೀಂ ಇಂಡಿಯಾ ಈಗ ಒಂದು ಟಿ-20 ಹಾಗೂ ಎರಡು ಎಕದಿನ ಪಂದ್ಯಗಳ ಸರಣಿಗಾಗಿ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಸೇರಲಿರುವ ಟೀಂ ಇಂಡಿಯಾ ಆಟಗಾರರು ಏಳು ದಿನಗಳ ಕಠಿಣ ಕ್ವಾರಂಟೈನ್ ಹಾಗೂ ಒಳಾಂಗಣ ತರಬೇತಿಯೊಂದಿಗೆ ಏಳು ದಿನಗಳ ಸಾಧಾರಣಾ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಜೂನ್ 28 ರಂದು ಟೀಂ ಇಂಡಿಯಾ ಕೊಲಂಬೊಕ್ಕೆ ಪ್ರಯಾಣ ಬೆಳೆಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com