ಕೋವಿಡ್-19: ಸೋದರನ ಬಳಿಕ ತಂದೆಯನ್ನೂ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ

ರಾಜಸ್ಥಾನ್ ರಾಯಲ್ಸ್ (ಆರ್.ಆರ್.) ವೇಗಿ ಚೇತನ್ ಸಕಾರಿಯಾ ಅವರ ತಂದೆ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಭಾನುವಾರ ತಿಳಿಸಿದೆ. 
ಚೇತನ್ ಸಕಾರಿಯಾ
ಚೇತನ್ ಸಕಾರಿಯಾ
Updated on: 

ನವದೆಹಲಿ: ರಾಜಸ್ಥಾನ್ ರಾಯಲ್ಸ್ (ಆರ್.ಆರ್.) ವೇಗಿ ಚೇತನ್ ಸಕಾರಿಯಾ ಅವರ ತಂದೆ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಭಾನುವಾರ ತಿಳಿಸಿದೆ. 

"ಕಾಂಜಿಭಾಯ್ ಸಕಾರಿಯಾ ಅವರು ಇಂದು ಕೋವಿಡ್-19 ರೊಂದಿಗಿನ ಹೋರಾಟದಲ್ಲಿ ಸೋತು ಸಾವನ್ನಪ್ಪಿದ್ದಾರೆ ಎಂದು ಹೇಳಲು ನಮಗೆ ತುಂಬಾ ದುಃಖವಾಗುತ್ತಿದೆ. ನಾವು ಚೇತನ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ" ಎಂದು ಆರ್.ಆರ್. ಟ್ವೀಟ್ ಮಾಡಿದೆ.

2021 ರಲ್ಲಿ ತನ್ನ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಿದ್ದ ಎಡಗೈ ವೇಗದ ಬೌಲರ್ ಚೇತನ್ ಸಕಾರಿಯಾ ಈ ವರ್ಷದ ಜನವರಿಯಲ್ಲಿ ತನ್ನ ಸಹೋದರನನ್ನು ಕಳೆದುಕೊಂಡಿದ್ದರು.

ಸಕಾರಿಯಾ ತನ್ನ ಸಹೋದರ ಸಾಯುವ ಸಮಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದರು. ಅಲ್ಲದೆ ಪಂದ್ಯಾವಳಿ ಮುಗಿಯುವವರೆಗೆ ಅವರಿಗೆ ಈ ದುಃಖದ ಸಂಗತಿಯ ಅರಿವಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com