ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಂ ಇಂಡಿಯಾ

ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಟೀಂ ಇಂಡಿಯಾ ಟೆಸ್ಟ್ ತಂಡ ಪ್ರಥಮ ಸ್ಥಾನ ಉಳಿಸಿಕೊಂಡಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ದುಬೈ: ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಟೀಂ ಇಂಡಿಯಾ ಟೆಸ್ಟ್ ತಂಡ ಪ್ರಥಮ ಸ್ಥಾನ ಉಳಿಸಿಕೊಂಡಿದೆ. 24 ಪಂದ್ಯಗಳಿಂದ 2914 ಪಾಯಿಂಟ್‌ ಸಂಪಾದಿಸಿರುವ ಟೀಂ ಇಂಡಿಯಾ 121 ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. 

ಇನ್ನು ವಿರಾಟ್ ಕೊಹ್ಲಿ ನೇತೃತ್ವದ ಟೆಸ್ಟ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಎದುರಾಳಿ ತಂಡ ನ್ಯೂಜಿಲೆಂಡ್ 120 ರೇಟಿಂಗ್ ಹೊಂದಿದ್ದು ಕಿವೀಸ್ 18 ಟೆಸ್ಟ್ ಪಂದ್ಯಗಳಿಂದ 2166 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. 

ಇನ್ನು 109 ರೇಟಿಂಗ್ ನೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನಕ್ಕೇರಿದ್ದು 108 ರೇಟಿಂಗ್ ನೊಂದಿಗೆ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ (94) ಐದನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ (84) ಎರಡು ಸ್ಥಾನಗಳ ಜಿಗಿತದೊಂದಿಗೆ ಆರನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ (80) ಮತ್ತು ಶ್ರೀಲಂಕಾ (78) ತಲಾ ಏಳನೇ ಮತ್ತು ಎಂಟನೇ ಸ್ಥಾನಗಳಿಗೆ ಇಳಿದಿದ್ದು, ಬಾಂಗ್ಲಾದೇಶ (46) ಮತ್ತು ಜಿಂಬಾಬ್ವೆ (35) ನಂತರದ ಸ್ಥಾನದಲ್ಲಿವೆ.

ಜೂನ್ 18 ರಿಂದ 22 ರವರೆಗೆ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com