ಕೆಕೆಆರ್ ಗೆ ಸಂಕಷ್ಟ: ವೇಗಿ ಪ್ಯಾಟ್ ಕಮಿನ್ಸ್ ಐಪಿಎಲ್ ನಿಂದ ಹೊರಕ್ಕೆ

ಐಪಿಎಲ್ ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುವ ವೇಗದ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಗೆ ಯುಎಇನಲ್ಲಿ ಮುಂದವರಿಯಲಿರುವ ಐಪಿಎಲ್ ನ ಹದಿನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದು.
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ಸಿಡ್ನಿ: ಕೊರೊನಾ ವೈರಸ್ ಹಾವಳಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹದಿನಾಲ್ಕನೇ ಆವೃತ್ತಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಯುನೈಟೆಡ್ ಅರಬ್ ಏಮಿರೇಟ್ಸ್ ನಲ್ಲಿ(ಯುಎಇ) ಮುಂದುವರಿಸಲಾಗುವುದೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ.

ಇದರೊಂದಿಗೆ ಐಪಿಎಲ್ ನ 14 ನೇ ಆವೃತ್ತಿ ಪೂರ್ಣಗೊಳ್ಳುವುದೇ ಎಂಬ ಶಂಕೆ ಈಗ ದೂರವಾದಂತಾಗಿದೆ. ಆದರೆ ಆ ಸಮಯದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಇತರ ರಾಷ್ಟ್ರಗಳ ಕೆಲ ಆಟಗಾರರು ಐಪಿಎಲ್ ನಲ್ಲಿ ಆಡಲು ಸಾಧ್ಯವಾಗದು ಎಂದು ಹೇಳಲಾಗುತ್ತಿದೆ.

ಐಪಿಎಲ್ ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುವ ವೇಗದ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಗೆ ಯುಎಇನಲ್ಲಿ ಮುಂದವರಿಯಲಿರುವ ಐಪಿಎಲ್ ನ ಹದಿನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದು.

ತಮ್ಮ ತಂಡದ ಆಟಗಾರರರು ಹೆಚ್ಚಿನ ಸಮಯವನ್ನು ಲೀಗ್ ಹಾಗೂ ಬಯೋ ಬಬಲ್ ನಲ್ಲಿ ಕಳೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಬಯಸಿದೆ. ಹೀಗಾಗಿ ಪ್ಯಾಟ್ ಕಮಿನ್ಸ್ ಗೆ ಯುಎಇನಲ್ಲಿ ಮುಂದವರಿಯಲಿರುವ ಐಪಿಎಲ್ ನ ಹದಿನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com