ಭಾರತ- ನ್ಯೂಜಿಲ್ಯಾಂಡ್ ಟಿ20 ಸರಣಿ: ಕೆಎಲ್ ರಾಹುಲ್ ಗೆ ನಾಯಕತ್ವ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಈ ವರೆಗಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲ್ಯಾಂಡ್-ಭಾರತ ಟಿ20 ಟೂರ್ನಮೆಂಟ್ ಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಜಸ್ಪ್ರೀತ್ ಬೂಮ್ರಾ-ಕೆಎಲ್ ರಾಹುಲ್
ಜಸ್ಪ್ರೀತ್ ಬೂಮ್ರಾ-ಕೆಎಲ್ ರಾಹುಲ್

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಈ ವರೆಗಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲ್ಯಾಂಡ್-ಭಾರತ ಟಿ20 ಟೂರ್ನಮೆಂಟ್ ಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಬಬಲ್ ಜೀವನದಿಂದ ಬೇಸತ್ತಿರುವ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಮುಂದಿನ ಟೂರ್ನಮೆಂಟ್ ಗೆ ಕೆಎಲ್ ರಾಹುಲ್ ಗೆ ನಾಯಕತ್ವ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾಹಿತಿ ಇರುವ ಮೂಲಗಳು ಎಎನ್ಐ ಜೊತೆ ಮಾತನಾಡಿದ್ದು, ನಾಯಕತ್ವದ ವಿಷಯದಲ್ಲಿ ರಾಹುಲ್ ಮುಂಚೂಣಿಯಲ್ಲಿದ್ದಾರೆ. ಹಿರಿಯ ಆಟಾಗಾರರಿಗೆ ವಿಶ್ರಾಂತಿಯಲ್ಲಿರಲಿದ್ದಾರೆ. ಖಂಡಿತವಾಗಿಯೂ ಕೆಎಲ್ ರಾಹುಲ್ ಅವರು ಟಿ20 ತಂಡದ ಅವಿಭಾಜ್ಯ ಅಂಗ. ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಈ ಬಾರಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಆದರೆ ಕೋವಿಡ್-19 ನ ಶಿಷ್ಟಾಚಾರಗಳನ್ನು ಪಾಲಿಸಬೇಕು. ಈ ಬಾರಿ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಅನುಮತಿ ನೀಡುತ್ತೇವೆ. ಆದರೆ ಪೂರ್ಣ ಪ್ರಮಾಣದಲ್ಲಿ ಅಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಕುಳಿತು ಯೋಜನೆ ರೂಪಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ತಂಡದ ಹಲವಾರು ಆಟಗಾರರು ವಿಶ್ರಾಂತಿಯ ಬಗ್ಗೆ ಮಾತನಾಡಿದ್ದಾರೆ. ಕಿವೀಸ್ ವಿರುದ್ಧದ ಸೋಲಿನ ನಂತರ ಜಸ್ಪ್ರೀತ್ ಬೂಮ್ರಾ ಈ ಬಗ್ಗೆ ಮಾತನಾಡಿದ್ದು, ಕೆಲವೊಮ್ಮೆ ವಿಶ್ರಾಂತಿ ಬೇಕೆನಿಸುತ್ತದೆ. ಕುಟುಂಬದ ಅನುಪಸ್ಥಿತಿ ಕಾಡುತ್ತದೆ. ಕುಟುಂಬದಿಂದ ದೂರವಿದ್ದು 6 ತಿಂಗಳಾಗಿದೆ. ಅವೆಲ್ಲವೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕ್ರೀಡಾಂಗಣದಲ್ಲಿರುತ್ತೀರಿ. ಆಗ ಅವುಗಳ ಬಗ್ಗೆ ಗಮನ ಹೋಗುವುದಿಲ್ಲ. ಯಾವುದನ್ನೂ ನಿಯಂತ್ರಿಸುವುದಿಲ್ಲ ಎಂದು ಬೂಮ್ರಾ ಹೇಳಿದ್ದಾರೆ.

ನ್ಯೂಜಿಲ್ಯಾಂಡ್-ಭಾರತ ಟಿ20 ಸರಣಿಯ ನಂತರ ಎರಡು ಟೆಸ್ಟ್ ಪಂದ್ಯಗಳಿದ್ದು. ಟಿ20 ಪಂದ್ಯಗಳು ನ.17 ರಂದು ಜೈಪುರದಲ್ಲಿ, ನ.19 ರಂದು ರಾಂಚಿ ಹಾಗೂ ನ.21 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯಗಳು ಕಾನ್ಪುರ (ನ.25-29) ಹಾಗೂ ಮುಂಬೈ (ಡಿ.3-7) ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com