ಟಿ20 ವಿಶ್ವಕಪ್: ಕೊಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯದಲ್ಲಿ ಭಾರತಕ್ಕೆ ನಮೀಬಿಯಾ ವಿರುದ್ಧ 9 ವಿಕೆಟ್ ಜಯ
ದುಬೈ: ಕೋಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯದಲ್ಲಿ (ಟಿ20 ವಿಶ್ವಕಪ್) ಭಾರತ ತಂಡ ನಮೀಬಿಯಾ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.
ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಮೀಬಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನು ಗಳಿಸಿತು. ಆರಂಭಿಕ ಆಟಗಾರರಾದ ಸ್ಟೀಫನ್ ಬಾರ್ಡ್ ಹಾಗೂ ಮೈಕಲ್ ವಾನ್ ಲಿಂಜೆನ್ ಉತ್ತಮ ಆರಂಭ ನೀಡಲು ಯತ್ನಿಸಿದರು ಆದರೆ ಒಂದೇ ರನ್ ನ ಅಂತರದಲ್ಲಿ ಭಾರತ 2 ವಿಕೆಟ್ ಕಬಳಿಸಿ ಉತ್ತಮ ಆರಂಭಕ್ಕೆ ಬ್ರೇಕ್ ಹಾಕಿತು.
ಬುಮ್ರಾ ಬೌಲಿಂಗ್ ದಾಳಿಗೆ ಲಿಂಜೆನ್ ವಿಕೆಟ್ ಒಪ್ಪಿಸಿದರೆ, ಕ್ರೆಗ್ ವಿಲಿಯಮ್ಸ್ ಖಾತೆ ತೆರೆಯುವ ಮೊದಲೇ ಜಡೇಜಾ ದಾಳಿಗೆ ಪೆವಿಲಿಯನ್ ನತ್ತ ನಡೆದರು.
ಇನ್ನು ನಮೀಬಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಆರ್ ಅಶ್ವಿನ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.
ರನ್ ಚೇಸಿಂಗ್ ನಲ್ಲಿ ಭಾರತದ ಪರ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಮೊದಲ ವಿಕೆಟ್ ಗೆ 86 ರನ್ ಗಳ ಅತ್ಯುತ್ತಮ ಜೊತೆಯಾಟ ನೀಡಿದರು, ರೋಹಿತ್ ಶರ್ಮಾ (56) ರಾಹುಲ್ (ಔಟಾಗದೇ 54 ರನ್ )ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕೊಹ್ಲಿ ನಾಯಕತ್ವ ಹಾಗೂ ರವಿಶಾಸ್ತ್ರಿಯ ಮಾರ್ಗದರ್ಶನದ ಕೊನೆಯ ಪಂದ್ಯ ಇದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ