ಕೊಚ್ಚಿ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಮತ್ತು ಕೇರಳದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಉದಯೋನ್ಮುಖ ಫುಟ್ ಬಾಲ್ ಆಟಗಾರನೊಬ್ಬನ ನೆರವಿಗೆ ಧಾವಿಸಿದ್ದಾರೆ.
ಸ್ಪೇನ್‌ನ 5ನೇ ಡಿವಿಷನ್ ಫುಟ್ಬಾಲ್ ಲೀಗ್‌ನಲ್ಲಿ 1 ತಿಂಗಳ ಅಭ್ಯಾಸ ಶಿಬಿರಕ್ಕೆ ಆಯ್ಕೆಯಾಗಿರುವ ಫುಟ್ ಬಾಲ್ ಆಟಗಾರ ಆದರ್ಶ್ ಅವರಿಗೆ ವಿಮಾನದ ಟಿಕೆಟ್ ಹೊಣೆಯನ್ನು ಸಂಜು ಸ್ಯಾಮ್ಸನ್ ಹೊತ್ತುಕೊಂಡಿದ್ದಾರೆ. ಅಲ್ಲದೇ, ಕೆಲ ಪಂದ್ಯಗಳಲ್ಲಿ ಅವರು ಆಡಲಿದ್ದಾರೆ.
ಕೇರಳದ ಮೀನುಗಾರಿಕೆ, ಸಂಸ್ಕೃತಿ ಮತ್ತು ಯುವ ವ್ಯವಹಾರಗಳ ಸಚಿವ ಶಾಜಿ ಚೆರಿಯನ್ ಫೇಸ್ ಬುಕ್ ಫೋಸ್ಟ್ ವೊಂದರ ಮೂಲಕ ಇದನ್ನು ತಿಳಿಸಿದ್ದಾರೆ. ಆದರ್ಶನ್ ತಿರುವಲ್ಲಾದ ಮಾರ್ ಥೊಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಅವಕಾಶ ಆದರ್ಶ್ ಭವಿಷ್ಯಕ್ಕೆ ಧಾರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಚೆರಿಯನ್ ಫೋಸ್ಟ್ ಮಾಡಿದ್ದಾರೆ. ಸ್ಯಾಮ್ಸನ್ ಈ ಹಿಂದೆಯೂ ಕೂಡಾ ಇಂತಹ ಹೃದಯ ವೈಶಾಲ್ಯತೆ ಗುಣದಿಂದಾಗಿ ಸುದ್ದಿಯಾಗಿದ್ದರು. ದಕ್ಷಿಣ ಆಫ್ರಿಕಾ ಭಾರತ ಪ್ರವಾಸದ ವೇಳೆಯಲ್ಲಿ ಪಂದ್ಯದ ಸಂಭಾವನೆಯನ್ನು ಮೈದಾನದ ಸಿಬ್ಬಂದಿಗೆ ನೀಡಿದ್ದರು.
Advertisement