ಭಾರತ ಮೂಲದ ಓಮನ್ ಆಟಗಾರ; ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.
ಓಮನ್ ಕ್ರಿಕೆಟ್ ತಂಡದ ಆಟಗಾರ ಜತೀಂದರ್ ಸಿಂಗ್
ಓಮನ್ ಕ್ರಿಕೆಟ್ ತಂಡದ ಆಟಗಾರ ಜತೀಂದರ್ ಸಿಂಗ್

ದುಬೈ: ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

ಈ ವರೆಗೆ ಕ್ವಾಲಿಫೈಯರ್ ಪಂದ್ಯಗಳಲ್ಲಿ ಜತೀಂದರ್ ಸಿಂಗ್ ಟಾಪ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ. ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಅಲ್ಲದೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ಜತಿಂದರ್ 40 ರನ್ ಗಳಿಸಿದ್ದರು.

ಜತೀಂದರ್ ಪಂಜಾಬ್ ನ ಲೂಧಿಯಾನದಲ್ಲಿ ಜನಿಸಿದ್ದಾರೆ. ತಂದೆ ಕಾರ್ಪೆಂಟ್ ವೃತ್ತಿ ನಡೆಸುತ್ತಿದ್ದಾರೆ. ಲೂಧಿಯಾನದ ಬೀದಿಗಳಲ್ಲಿ ಕ್ರಿಕೆಟ್ ಆಡಿರುವ ಜತೀಂದರ್, 15ನೇ ವರ್ಷದವರಿದ್ದಾಗ ತಮ್ಮ ಪರಿವಾರದೊಂದಿಗೆ ಓಮನ್ ಗೆ ಹೋಗಿ ನೆಲಸಿದ್ದಾರೆ.

ಬಲಗೈ ಬ್ಯಾಟ್ಸಮನ್ ಆಗಿರುವ ಜತೀಂದರ್ ಸಿಂಗ್, ಆತನ ಆಡುವ ಶೈಲಿ ಶಿಖರ್ ಧವನ್ ಅವರನ್ನು ಹೋಲುತ್ತದೆ. ಹೀಗಾಗಿ, ಓಮನ್ ತಂಡದ ಶಿಖರ್ ಧವನ್ ಅಂತಾ ಜತೀಂದರ್ ನನ್ನು ಕರೆಯಲಾಗುತ್ತದೆ. ಭಾನುವಾರ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವುದಾಗಿ ಜತೀಂದರ್ ಸಿಂಗ್ ತಿಳಿಸುತ್ತಾರೆ. ತಾನು ಯಾವಾಗಿದ್ದರೂ ಭಾರತ ಕ್ರಿಕೆಟ್ ತಂಡದ ಪರ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನೆಚ್ಚಿನ ಆಟಗಾರರಾಗಿದ್ದಾರೆಂದು ಜತೀಂದರ್ ಸಿಂಗ್ ತಿಳಿಸುತ್ತಾರೆ.

ಓಮನ್ ಕ್ರಿಕೆಟ್ ತಂಡದಲ್ಲಿ ಒಟ್ಟು ಐವರು ಭಾರತೀಯ ಸಂಜಾತರಿದ್ದಾರೆ. ಓರ್ವ ಮಾತ್ರ ಓಮನ್ ಮೂಲದ ಆಟಗಾರನಿದ್ದು, ಉಳಿದವರು ಪಾಕಿಸ್ತಾನ ಮೂಲದವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com