ಕೊಹ್ಲಿಗೆ ಸಚಿನ್ ಸಹಾಯ ಪಡೆದುಕೊಳ್ಳಿ ಎಂದಿದ್ದೇಕೆ ಸುನಿಲ್ ಗವಾಸ್ಕರ್?
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಂದ ಮಾರ್ಗದರ್ಶನ ಪಡೆಯಬೇಕು ಹಾಗೂ ಲಯ ಕಂಡುಕೊಳ್ಳಲು ಸಚಿನ್ ಅವರ 2004 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಆಟದಿಂದ ಸ್ಪೂರ್ತಿ ಪಡೆಯಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
Published: 26th August 2021 06:45 AM | Last Updated: 26th August 2021 06:28 AM | A+A A-

ಸುನಿಲ್ ಗವಾಸ್ಕರ್-ಕೊಹ್ಲಿ
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಂದ ಮಾರ್ಗದರ್ಶನ ಪಡೆಯಬೇಕು ಹಾಗೂ ಲಯ ಕಂಡುಕೊಳ್ಳಲು ಸಚಿನ್ ಅವರ 2004 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಆಟದಿಂದ ಸ್ಪೂರ್ತಿ ಪಡೆಯಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ತಕ್ಷಣ ಸಚಿನ್ ತೆಂಡೂಲ್ಕರ್ ನ್ನು ಸಂಪರ್ಕಿಸಬೇಕು ಹಾಗೂ ತಾವೇನು ಮಾಡಬೇಕೆಂಬುದನ್ನು ಕೇಳಬೇಕು" ಎಂಬುದನ್ನು ಕೇಳಬೇಕು
"ಸಿಡ್ನಿಯಲ್ಲಿ ಸಚಿನ್ ಏನು ಮಾಡಿದ್ದರೋ ಅದನ್ನು ವಿರಾಟ್ ಕೊಹ್ಲಿ ಮಾಡಬೇಕು, ಕವರ್ ಡ್ರೈವ್ ಆಡುವುದಿಲ್ಲ ಎಂದು ತಮಗೆ ತಾವೇ ಹೇಳಿಕೊಳ್ಳಬೇಕು" ಎಂದು ಗವಾಸ್ಕರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಕೊಹ್ಲಿ ಜೇಮ್ಸ್ ಆಂಡರ್ಸನ್ ಅವರ ಆಫ್ ಸ್ಟಮ್ ನ ಹೊರಭಾಗದಲ್ಲಿದ್ದ ಎಸೆತವನ್ನು ಆಡಲು ಹೋಗಿ ವಿಕೆಟ್ ಕೀಪರ್ ಗೆ ಕ್ಯಾಚ್ ಇತ್ತು ವಿಕೆಟ್ ಒಪ್ಪಿಸಿದ್ದರು.
23 ಟೆಸ್ಟ್ ಗಳ ಪೈಕಿ ಕೊಹ್ಲಿಯನ್ನು ಆಂಡರ್ಸನ್ ಈ ರೀತಿ ಪೆವಿಲಿಯನ್ ಗೆ ಕಳಿಸುತ್ತಿರುವುದು ಇದು 7 ನೇ ಬಾರಿಯಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ನ ಈ ವೇಗಿಯನ್ನು ಹೊರತುಪಡಿಸಿದರೆ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅವರಿಗೆ ವಿರಾಟ್ ಕೊಹ್ಲಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಕೊಹ್ಲಿ ಆಫ್ ಸ್ಟಂಪ್ ಗಳ ಆಚೆಗಿನ ಎಸೆತಗಳನ್ನು ಆಡಲು ಯತ್ನಿಸುತ್ತಿರುವುದು ಆತಂಕಕಾರಿ ಎಂದು ಗವಾಸ್ಕರ್ ಹೇಳಿದ್ದಾರೆ. 2003-04 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಈ ರೀತಿಯ ಎಸೆತಗಳನ್ನು ಅದ್ಭುತವಾಗಿ ನಿಭಾಯಿಸಿ ಆಡಿದ್ದು ಐತಿಹಾಸಿಕವಾಗಿ ದಾಖಲಾದ ಸಂಗತಿಯಾಗಿದೆ.