ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಗುಡ್ ಬೈ

ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅಂಟಾರಾಷ್ಟ್ರೀಯ ಹಾಗೂ ಮೊದಲ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಸ್ಟುವರ್ಟ್ ಬಿನ್ನಿ
ಸ್ಟುವರ್ಟ್ ಬಿನ್ನಿ

ಬೆಂಗಳೂರು: ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅಂಟಾರಾಷ್ಟ್ರೀಯ ಹಾಗೂ ಮೊದಲ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಬಿನ್ನಿ ಈ ವರೆಗೂ 6 ಟೆಸ್ಟ್ ಗಳು, 14 ಏಕದಿನ ಪಂದ್ಯಗಳು, 3 ಟಿ20ಗಳನ್ನಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಏಕದಿನದ ಪಂದ್ಯದಲ್ಲಿ 6-4 ದಾಖಲಿಸಿರುವುದು ಸ್ಟುವರ್ಟ್ ಬಿನ್ನಿ ಅವರ ಅತ್ಯುತ್ತಮ ಸಾಧನೆಯಾಗಿದೆ.

"ಮೊದಲ ದರ್ಜೆ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುತ್ತಿರುವುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನು ದೇಶವನ್ನು ಪ್ರತಿನಿಧಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ" ಎಂದು ಸ್ಟುವರ್ಟ್ ಬಿನ್ನಿ ಹೇಳಿದ್ದಾರೆ.

"ಬಿಸಿಸಿಐ ನನ್ನ ಕ್ರಿಕೆಟ್ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇಷ್ಟು ವರ್ಷಗಳ ಕಾಲ ಅವರ ಬೆಂಬಲ ಹಾಗೂ ನಂಬಿಕೆ ಅಮೂಲ್ಯವಾದದ್ದು. ಕರ್ನಾಟಕ ರಾಜ್ಯ ಹಾಗೂ ಅದರ ಬೆಂಬಲ ಇಲ್ಲದೇ ನನ್ನ ಕ್ರಿಕೆಟ್ ಪಯಣ ಪ್ರಾರಂಭವಾಗುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ, ರಾಜ್ಯದ ನಾಯಕತ್ವ ವಹಿಸಿ ಟ್ರೋಫಿಗಳನ್ನು ಗೆದ್ದಿರುವುದು ಗೌರವದ ವಿಷಯ" ಎಂದು ಸ್ಟುವರ್ಟ್ ಬಿನ್ನಿ ಹೇಳಿದ್ದಾರೆ.

"ಕ್ರಿಕೆಟ್ ಕ್ರೀಡೆ ನನ್ನ ರಕ್ತಗತವಾಗಿದೆ, ನನೆಗೆ ಎಲ್ಲವನ್ನೂ ಕೊಟ್ಟಿರುವ ಕ್ರಿಕೆಟ್ ಕ್ರೀಡೆಗೆ ನಾನು ಮರಳಿ ಕೊಡುವ ಬಗ್ಗೆ ಸದಾ ಮಗ್ನನಾಗಿರುತ್ತೇನೆ, ನನ್ನ ಮುಂದಿನ ಇನ್ನಿಂಗ್ಸ್ ಗೆ ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ" ಎಂದು ಬಿನ್ನಿ ತಿಳಿಸಿದ್ದಾರೆ.

ಐಪಿಎಲ್ ನಲ್ಲೂ ಸಕ್ರಿಯರಾಗಿದ್ದ ಬಿನ್ನಿ, ಮುಂಬೈ ಇಂಡಿಯನ್ಸ್, ಆರ್ ಸಿಬಿ, ಆರ್ ಆರ್ ತಂಡಗಳಲ್ಲಿ ಆಡಿದ್ದರು. 2003/04 ಸೀಸನ್ ನಲ್ಲಿ ರಾಜ್ಯ ತಂಡಕ್ಕೆ ಮೊದಲ ಬಾರಿ ಬಿನ್ನಿ ಆಡಿದ್ದರು.

2014 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಒಡಿಐ ಟೂರ್ನಮೆಂಟ್ ಗೆ ಬಿನ್ನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಮೊದಲ ಏಕದಿನ ಪಂದ್ಯವನ್ನು ಇದೇ ಸರಣಿಯಲ್ಲಿ ಆಡಿದ್ದರು. 2014 ರ ಜೂ.17 ರಲ್ಲಿ ಬಿನ್ನಿ ಕೇವಲ ನಾಲ್ಕು ರನ್ ನೀಡಿ 6 ವಿಕೆಟ್ ಗಳಿಸಿ, ಭಾರತದ ಯಾವುದೇ ಬೌಲರ್ ನ ಅತ್ಯುತ್ತಮ ಸಾಧನೆ ವಿಭಾಗದಲ್ಲಿ ಅನಿಲ್ ಕುಂಬ್ಳೆ ಅವರನ್ನು ಸರಿಗಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com